ADVERTISEMENT

ಗುಜರಾತ್: ಪಿಕ್ ಅಪ್ ವಾಹನ ಅಪಘಾತ, 9 ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 16:16 IST
Last Updated 7 ಜೂನ್ 2019, 16:16 IST
   

ಗುಜರಾತ್:ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನವೊಂದು ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟು 27 ಮಂದಿ ಗಾಯಗೊಂಡಿರುವ ಘಟನೆ ಗಾಂಧಿನಗರದ ಆಂಬಾಜಿ ಸಮೀಪ ಶುಕ್ರವಾರ ಸಂಭವಿಸಿದೆ.

ಗಾಂಧಿನಗರದಿಂದ 150 ಕಿಲೋ ಮೀಟರ್ ದೂರದಲ್ಲಿರುವ ಅಂಬಾಜಿಯ ತ್ರಿಶೂಲಿಯಾ ಘಾಟ್ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ. ಮೃತರೆಲ್ಲರೂ ವಡಗಾಂವ್ ಎಂಬ ಗ್ರಾಮದವರು.ಕಾರ್ಯಕ್ರಮ ಒಂದರ ನಿಮಿತ್ತ ಪಿಕ್ ಅಪ್ ವಾಹನದಲ್ಲಿ 30 ಮಂದಿ ತೆರಳುತ್ತಿದ್ದರು. ಸಂಜೆ ಮೂರರಿಂದ ನಾಲ್ಕು ಗಂಟೆ ಸಮಯದಲ್ಲಿ ವಾಹನ ಆಯತಪ್ಪಿ ಬಿದ್ದಿದೆ. ಸಾರ್ವಜನಿಕರೊಬ್ಬರು ಕೂಡಲೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಅಂಬಾಜಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟವರಹೆಸರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಹಿರಿಯಅಧಿಕಾರಿಗಳು ಭೇಟಿ ನೀಡಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT