ADVERTISEMENT

ನಿರ್ಭಯಾ ಅತ್ಯಾಚಾರ ಪ್ರಕರಣದ ವಕೀಲೆ ಬಿಎಸ್‌ಪಿ ವಕ್ತಾರೆಯಾಗಿ ನೇಮಕ

ಪಿಟಿಐ
Published 4 ಫೆಬ್ರುವರಿ 2022, 7:31 IST
Last Updated 4 ಫೆಬ್ರುವರಿ 2022, 7:31 IST
ಮಾಯಾವತಿ ಅವರೊಂದಿಗೆ ಸೀಮಾ ಕುಶ್ವಾಹಾ
ಮಾಯಾವತಿ ಅವರೊಂದಿಗೆ ಸೀಮಾ ಕುಶ್ವಾಹಾ   

ಲಖನೌ: ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ವಕೀಲೆ ಸೀಮಾ ಕುಶ್ವಾಹಾ ಅವರನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತನ್ನ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದೆ.

ಸೀಮಾ ಕುಶ್ವಾಹಾ ಅವರು ಬಿಎಸ್‌ಪಿಯ ಮೊದಲ ಮಹಿಳಾ ವಕ್ತಾರರೆನಿಸಿದ್ದಾರೆ.

ಕುಶ್ವಾಹ ಅವರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿದ್ದವರು. ಕೆಳ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್‌ವರೆಗೆ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು ಎಂದು ಬಿಎಸ್‌ಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಕುಶ್ವಾಹಾ ಅವರನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ. ಅವರು ಅಸಾಧಾರಣ ವಕೀಲೆ ಮಾತ್ರವಲ್ಲದೆ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಅವರು ಪಶ್ಚಿಮ ಉತ್ತರ ಪ್ರದೇಶ, ಇಟಾವಾ ಮತ್ತು ಬುಂದೇಲ್‌ಖಂಡದಲ್ಲಿ ಮೌರ್ಯ, ಶಾಕ್ಯ ಮತ್ತು ಕುಶ್ವಾಹ ಸಮುದಾಯಗಳಲ್ಲಿ ಉತ್ತಮ ಪ್ರಭಾವ ಹೊಂದಿದ್ದಾರೆ. ಭವಿಷ್ಯದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿಯನ್ನೂ ನೀಡಲಾಗುವುದು‘’ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.