ADVERTISEMENT

video: ರಘುಪತಿ ರಾಘವ ರಾಜಾರಾಮ್ ಹಾಡಿಗೆ ನೀತಾ ಅಂಬಾನಿ ನೃತ್ಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 7:53 IST
Last Updated 1 ಏಪ್ರಿಲ್ 2023, 7:53 IST
   

ಮುಂಬೈ: ಮುಕೇಶ್ ಅಂಬಾನಿ ಕುಟುಂಬವು ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು(ಎನ್‌ಎಂಎಸಿಸಿ) ಲೋಕಾರ್ಪಣೆ ಮಾಡಿದ್ದು, ಈ ಕಾರ್ಯಕ್ರಮದ ಹಲವು ಚಿತ್ರ, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಒಂದು ವಿಡಿಯೊದಲ್ಲಿ ನೀತಾ ಅಂಬಾನಿ, ಆಕರ್ಷಕ ಲೆಹೆಂಗಾ ಧರಿಸಿ ರಘುಪತಿ ರಾಘವ ರಾಜಾರಾಮ್ ಹಾಡಿಗೆ ನೃತ್ಯ ಮಾಡಿದ್ದಾರೆ.

ಹಲವು ಪಾಪರಾಜಿಗಳು ಮತ್ತು ಎನ್‌ಎಂಎಸಿಸಿಯ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಈ ವಿಡಿಯೊ ಹಂಚಿಕೊಳ್ಳಲಾಗಿದೆ.

ADVERTISEMENT

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾರುಕ್ ಖಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಜಾಹ್ನವಿ ಕಪೂರ್, ವರುಣ್ ಧವನ್, ಕೃತಿ ಸನೊನ್, ಕರೀನಾ ಕಪೂರ್, ಅಮೀ್ರ್ ಖಾನ್ ಮುಂತಾದ ತಾರೆಯರ ದಂಡೇ ನೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.