ADVERTISEMENT

ನಿತೀಶ್‌ ಕುಮಾರ್‌ ಅವರೇ ಬಿಹಾರದ ಮುಂದಿನ ಸಿ.ಎಂ: ಕೇಂದ್ರ ಸಚಿವ ಗಿರಿರಾಜ್ ಸಿಂಗ್‌

ಪಿಟಿಐ
Published 18 ನವೆಂಬರ್ 2025, 14:13 IST
Last Updated 18 ನವೆಂಬರ್ 2025, 14:13 IST
ಗಿರಿರಾಜ್ ಸಿಂಗ್‌
ಗಿರಿರಾಜ್ ಸಿಂಗ್‌   

ನವದೆಹಲಿ: ’ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರೇ ಮುಂದುವರಿಯಲಿದ್ದಾರೆ‘ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ ಅವರು ಮಂಗಳವಾರ ಹೇಳಿದರು.

‘ಗೊಂದಲಕ್ಕೆ ಕಾರಣ ಏನೆಂದು ನನಗೆ ಗೊತ್ತಾಗುತ್ತಿಲ್ಲ. ನಿತೀಶ್‌ ಕುಮಾರ್‌ ಅವರ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸಿದ್ದೇವೆ. ಹಾಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಎಲ್ಲ ಪಕ್ಷಗಳಿಗೂ ಆದರದ್ದೇ ಆದ ಪ್ರಕ್ರಿಯೆಗಳಿರುತ್ತದೆ. ಹಾಗಾಗಿ, ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಸಭೆ ನಡೆಸುತ್ತಿವೆ’ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಯು ಶಾಸಕಾಂಗ ಪಕ್ಷದ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಿದ್ದು, ಬಳಿಕ ಜಂಟಿಯಾಗಿ ಎನ್‌ಡಿಎ ಮೈತ್ರಿಕೂಟದ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಾಯಕನ ಆಯ್ಕೆ ನಡೆಯುತ್ತದೆ. ನನಗೆ ವಿಶ್ವಾಸವಿದೆ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.