ADVERTISEMENT

ಕಾಶ್ಮೀರದ 3 ಜಿಲ್ಲೆಗಳು ಉಗ್ರರಿಂದ ಮುಕ್ತ: ಎಡಿಜಿಪಿ

ಪಿಟಿಐ
Published 27 ನವೆಂಬರ್ 2022, 10:54 IST
Last Updated 27 ನವೆಂಬರ್ 2022, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕಾಶ್ಮೀರದ ಬಂಡಿಪೊರ, ಕುಪ್ವಾರ ಮತ್ತು ಗಾಂದರ್‌ಬಲ್‌ ಜಿಲ್ಲೆಗಳು ಉಗ್ರರಿಂದ ಮುಕ್ತವಾಗಿವೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾಶ್ಮೀರ ವಲಯ) ವಿಜಯ್‌ ಕುಮಾರ್‌ ಶನಿವಾರ ತಿಳಿಸಿದ್ದಾರೆ.

‘ಈ ಮೂರು ಜಿಲ್ಲೆಗಳಲ್ಲಿ ಯಾವುದೇ ಸಕ್ರಿಯ ಸ್ಥಳೀಯ ಉಗ್ರರಿಲ್ಲ.ಲಷ್ಕರ್‌–ಎ–ತೈಯಬಾ ಮತ್ತು ಜೈಷ್‌–ಎ–ಮಹಮ್ಮದ್‌ನಂಥ ಪ್ರಮುಖ ಉಗ್ರ ಸಂಘಟನೆಗಳ ಉಗ್ರರನ್ನು ಭಾರತೀಯ ಸೇನೆಯು ಕಾರ್ಯಾಚರಣೆ ಮತ್ತು ಎನ್‌ಕೌಂಟರ್‌ ಮೂಲಕ ಸದೆಬಡಿದಿದೆ.ಆದರೆ ಬಂಡಿಪೊರ ಮತ್ತು ಕುಪ್ವಾರದಲ್ಲಿ ಕನಿಷ್ಠ ಏಳು ಮಂದಿ ವಿದೇಶಿ ಭಯೋತ್ಪಾದಕರಿದ್ದಾರೆ’ ಎಂದು ತಿಳಿಸಿದ್ದಾರೆ.

‘ಕಾಶ್ಮೀರದ 13 ಪೊಲೀಸ್‌ ಪೊಲೀಸ್‌ ಜಿಲ್ಲೆಗಳಲ್ಲಿ 29 ಸ್ಥಳೀಯ ಉಗ್ರರು ಮತ್ತು 52 ವಿದೇಶಿ (ಪಾಕಿಸ್ತಾನ) ಉಗ್ರರು ಸೇರಿ 81 ಮಂದಿ ಭಯೋತ್ಪಾದಕರಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.