ADVERTISEMENT

ಐದು ರಾಜ್ಯಗಳಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಇಲ್ಲ: ಸಿಪಿಎಂ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 9:21 IST
Last Updated 7 ಅಕ್ಟೋಬರ್ 2018, 9:21 IST
ಸಂಗ್ರಹ ಚಿತ್ರ (ಕೃಪೆ:ಪಿಟಿಐ)
ಸಂಗ್ರಹ ಚಿತ್ರ (ಕೃಪೆ:ಪಿಟಿಐ)   

ನವದೆಹಲಿ: ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡುವುದಿಲ್ಲ ಎಂದು ಸಿಪಿಎಂ ಹೇಳಿದೆ. ಆದಾಗ್ಯೂ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಸದ್ಯ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.ಈ ಬಗ್ಗೆ ಜನವರಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪಕ್ಷ ಹೇಳಿದೆ.

ಶನಿವಾರ ನವದೆಹಲಿಯಲ್ಲಿ ಸಿಪಿಎಂ ಕೇಂದ್ರ ಸಮಿತಿಯ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ ಸಭೆ ನಡೆಯಲಿದೆ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಏಳು ಪಕ್ಷಗಳ ಮೈತ್ರಿಕೂಟ ನಿರ್ಧಾರಕ್ಕೆ ಸಿಪಿಎಂ ಬೆಂಬಲ ಸೂಚಿಸಿದೆ.

ಸಿಪಿಎಂ, ಸಿಪಿಐ, ಸಮಾಜವಾದಿ ಪಕ್ಷ, ಜೆಡಿ(ಎಸ್), ಸಿಪಿಐ(ಎಂಎಲ್ ) ಮತ್ತು ಮಾರ್ಕ್ಸಿಸ್ಟ್ -ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಸಿಪಿಐ) ಪಕ್ಷಗಳು ರಾಜಸ್ಥಾನದಲ್ಲಿನ ಚುನಾವಣೆಯಲ್ಲಿ ರಾಜಸ್ಥಾನ ಡೆಮಾಕ್ರಟಿಕ್ ಫ್ರಂಟ್ ಎಂಬ ಮೈತ್ರಿಕೂಟವಾಗಿ ಚುನಾವಣೆ ಎದುರಿಸಲಿದೆ.

ADVERTISEMENT

ಮಧ್ಯ ಪ್ರದೇಶ ಮತ್ತು ಚಂಡೀಗಢದಲ್ಲಿ ಸಣ್ಣ ಪಕ್ಷಗಳೊಂದಿಗೆ ಕೈ ಜೋಡಿಸಲಿರುವ ಸಿಪಿಎಂ, ಕಾಂಗ್ರೆಸ್ ಮೈತ್ರಿಯಿಂದ ದೂರ ಇರಲಿದೆ.ಆದರೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪರಾಭವಗೊಳಿಸುವುದಕ್ಕಾಗಿ ಸಿಪಿಎಂ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.