ADVERTISEMENT

ಕೋವಿಡ್‌ಗೆ ಮದ್ದು ಕಂಡುಹಿಡಿಯುವ ತನಕ ನಿರ್ಲಕ್ಷ್ಯ ತೋರಬೇಡಿ: ಮೋದಿ

ಪಿಟಿಐ
Published 12 ಸೆಪ್ಟೆಂಬರ್ 2020, 10:11 IST
Last Updated 12 ಸೆಪ್ಟೆಂಬರ್ 2020, 10:11 IST
ಮಧ್ಯಪ್ರದೇಶದ ಗೃಹಪ್ರವೇಶ ವರ್ಚುವಲ್‌ ಕಾರ್ಯಕ್ರಮದಲ್ಲಿ ಮೋದಿ ಭಾಗಿ
ಮಧ್ಯಪ್ರದೇಶದ ಗೃಹಪ್ರವೇಶ ವರ್ಚುವಲ್‌ ಕಾರ್ಯಕ್ರಮದಲ್ಲಿ ಮೋದಿ ಭಾಗಿ   

ಭೋಪಾಲ್: ‘ಕೋವಿಡ್‌ಗೆ ಮದ್ದು ಕಂಡುಹಿಡಿಯುವ ತನಕ, ಸೋಂಕಿನ ಕುರಿತು ನಿರ್ಲಕ್ಷ್ಯ ತೋರಿಸಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಲಾದಮನೆಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ‘ಜಬ್‌ ತಕ್‌ ದವಾಯಿ ನಹೀ, ತಬ್‌ ತಕ್‌ ಡಿಲಾಯಿ ನಹೀ’, ‘ದೋ ಗಜ್‌ ಕಿ ದೂರಿ ಮಾಸ್ಕ್‌ ಹೈ ಜರೂರಿ’ಎಂಬ ಘೋಷವಾಕ್ಯಗಳನ್ನು ಹೇಳುವ ಮೂಲಕ ಅವರು ಕೋವಿಡ್‌–19 ಕುರಿತಂತೆ ಇನ್ನೂ ಮುನ್ನೆಚ್ಚರಿಕೆ ಅಗತ್ಯ ಎಂದು ಪ್ರತಿಪಾದಿಸಿದರು.

ADVERTISEMENT

ಬಡವರನ್ನು ಬಲಪಡಿಸುವ ಮೂಲಕ ಬಡತನಕ್ಕೆ ಅಂತ್ಯ ಹಾಡಬೇಕಿದೆ. ಈ ನಿಟ್ಟಿನಲ್ಲಿಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಬಡವರ ಸಬಲೀಕರಣದ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಯೋಜನೆಯಡಿ ನಿರ್ಮಿಸಲಾದ 1.75 ಲಕ್ಷ ಮನೆಗಳ ಗೃಹಪ್ರವೇಶ ಸಮಾರಂಭಕ್ಕೂ ಅವರು ಚಾಲನೆ ನೀಡಿದರು. ನಂತರ ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.