ADVERTISEMENT

ನೀರು ಸೋರಿಕೆ: ಕೊಯ್ನಾ ಜಲಾಶಯಕ್ಕೆ ಅಪಾಯವಿಲ್ಲ ಎಂದ ಜಲಸಂಪನ್ಮೂಲ ಇಲಾಖೆ

ಪಿಟಿಐ
Published 8 ನವೆಂಬರ್ 2022, 20:20 IST
Last Updated 8 ನವೆಂಬರ್ 2022, 20:20 IST

ಪುಣೆ: ‘ಕೊಯ್ನಾ ಜಲವಿದ್ಯುತ್‌ ಯೋಜನೆಯ ತುರ್ತು ಕವಾಟದ ಸುರಂಗದ ಗೋಡೆಯಿಂದ ನೀರು ಸೋರಿಕೆ ಆಗುತ್ತಿರುವುದರ ಕುರಿತು ವರದಿಯಾಗಿದ್ದು, ಇದರಿಂದ ಕೊಯ್ನಾ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ’ ಎಂದು ಜಲಸಂಪನ್ಮೂಲ ಇಲಾಖೆಯ ಮಂಗಳವಾರ ತಿಳಿಸಿದೆ.

‘ಅಲೆಗಳಿಂದಾಗಿ ಕಾಂಕ್ರಿಟ್‌ ಪದರಗಳ ನಡುವೆ ಬಿರುಕು ಕಾಣಿಸಿಕೊಂಡಿದ್ದು ಅವುಗಳ ಮೂಲಕ ನೀರು ಸೋರಿಕೆಯಾ‌ಗುತ್ತಿದೆ. ಸಮಸ್ಯೆ ಪರಿಹರಿಸುವುದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಸದ್ಯದ ಮಟ್ಟಿಗೆ ಯಾವುದೇ ಅಪಾಯವಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT