ADVERTISEMENT

ಬಿಜೆಪಿ–ಎಎಪಿ ಸೇರ್ಪಡೆ ನಿರ್ಧಾರ ಇಲ್ಲ: ಹಾರ್ದಿಕ್‌ ಪಟೇಲ್

ಪಿಟಿಐ
Published 19 ಮೇ 2022, 14:35 IST
Last Updated 19 ಮೇ 2022, 14:35 IST
ಹಾರ್ದಿಕ್‌ ಪಟೇಲ್‌
ಹಾರ್ದಿಕ್‌ ಪಟೇಲ್‌   

ಅಹಮದಾಬಾದ್‌: ‘ಕಾಂಗ್ರೆಸ್‌ ಪಕ್ಷದಲ್ಲಿದ್ದು ಬದುಕಿನ ಮೂರು ವರ್ಷಗಳು ವ್ಯರ್ಥವಾದುವು. ಬಿಜೆಪಿ, ಎಎಪಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಕುರಿತು ಇದುವರೆಗೆ ನಿರ್ಧರಿಸಿಲ್ಲ’ ಎಂದು ಕಾಂಗ್ರೆಸ್‌ ತೊರೆದಿರುವ ಪಾಟೀದಾರ್‌ ಮೀಸಲಾತಿ ಪರ ಹೋರಾಟಗಾರ ಹಾರ್ದಿಕ್‌ ಪಟೇಲ್ ಗುರುವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ಪ್ರಕರಣದಲ್ಲಿ ಬಿಜೆಪಿಯ ಪ್ರಯತ್ನವನ್ನು ಹಾಗೂ 370ನೇ ಕಲಂ ರದ್ದು ಮಾಡಿರುವುದನ್ನು ಪ್ರಶಂಸಿಸಿದರು. ಕಾಂಗ್ರೆಸ್‌ನ ‘ಮನ್ನೋಟ’ ಇಲ್ಲದ ನಾಯಕರು ಗುಜರಾತ್‌ನ ಜನರ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಜನರ ಹಿತದೃಷ್ಟಿಗೆ ಅನುಗುಣವಾಗಿರುತ್ತದೆ ಎಂದೂ ಅವರು ತಿಳಿಸಿದ್ದಾರೆ. ಹಾರ್ದಿಕ್‌ ಅವರು ಕಾಂಗ್ರೆಸ್‌ಗೆ ಬುಧವಾರ ರಾಜೀನಾಮೆ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.