ADVERTISEMENT

ನೆಹರೂ ಜನ್ಮದಿನಾಚರಣೆಗೆ ಕೇಂದ್ರದ ಯಾವ ಸಚಿವರೂ ಭಾಗವಹಿಸಿಲ್ಲ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2021, 1:55 IST
Last Updated 15 ನವೆಂಬರ್ 2021, 1:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆ ಸಲುವಾಗಿ ಸಂಸತ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಂದ್ರದ ಯಾವ ಸಚಿವರೂ ಹಾಜರಾಗಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್, ಸಂಸತ್ತಿನಲ್ಲಿ ನಡೆದ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಚಿವರು ಹಾಜರಾಗದಿರುವುದು ‘ಅಸಾಮಾನ್ಯ‘ ಸಂಗತಿ ಎಂದು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸಭಾಂಗಣಕ್ಕೆ ಮೆರುಗು ತಂದವರ ಜನ್ಮದಿನಾಚರಣೆ ಸಲುವಾಗಿ ಸಂಸತ್ತಿನಲ್ಲಿ ಇಂದು ನಡೆದ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಅಸಾಮಾನ್ಯ ಸನ್ನಿವೇಶ ಕಂಡುಬಂದಿತು. ಲೋಕಸಭೆ ಸ್ಪೀಕರ್ ಗೈರು. ರಾಜ್ಯಸಭೆ ಅಧ್ಯಕ್ಷರು ಗೈರು. ಕೇವಲ ಒಬ್ಬ ಸಚಿವರೂ ಹಾಜರಿರಲಿಲ್ಲ. ಇದಕ್ಕಿಂತಲೂಅಮಾನವೀಯವಾದದ್ದು ಮತ್ತೊಂದು ಇರಲು ಸಾಧ್ಯವೇ? ಎಂದು ಭಾನುವಾರ ಟ್ವೀಟ್ ಮಾಡಿದ್ದಾರೆ.

ADVERTISEMENT

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪಕ್ಷದ ಇತರ ನಾಯಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ಜೈರಾಮ್ ರಮೇಶ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ‘ಬ್ರಯಾನ್, ‘ನನಗೆ ಇದರಲ್ಲೇನೂ ಅಚ್ಚರಿಯಿಲ್ಲ. ಈ ಆಡಳಿತವು ಸಂಸತ್ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳನ್ನು ಒಂದೊಂದಾಗಿ ನಾಶ ಮಾಡುತ್ತಿದೆ‘ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.