ADVERTISEMENT

ಬಿಜೆಪಿಯಷ್ಟು ಭ್ರಷ್ಟ ಪಕ್ಷ ಬೇರೊಂದಿಲ್ಲ: ಗುಲಾಂ ನಬಿ ಆಜಾದ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 8:44 IST
Last Updated 4 ಫೆಬ್ರುವರಿ 2019, 8:44 IST
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್   

ನವದೆಹಲಿ: ಕೇಂದ್ರದಲ್ಲಿ ಅಧಿಕಾರಕ್ಕೇರಿದಂದಿನಿಂದ ಬಿಜೆಪಿ ದೇಶದ ಅಭಿವೃದ್ಧಿಗಾಗಿ ಗಮನ ಹರಿಸಿದ್ದು ತೀರಾ ಕಡಿಮೆ. ಕಳೆದ 5 ವರ್ಷಗಳಲ್ಲಿ ವಿಪಕ್ಷಗಳನ್ನು ನಿರ್ಮೂಲನೆಮಾಡುವುದು ಹೇಗೆ ಎಂಬುದರ ಬಗ್ಗೆಯೇ ಬಿಜೆಪಿ ಹೆಚ್ಚು ಗಮನ ಹರಿಸಿದೆ.ಬಿಜೆಪಿಯಷ್ಟು ಭ್ರಷ್ಟ ಪಕ್ಷ ಬೇರೊಂದಿಲ್ಲ ಎಂದು ಕಾಂಗ್ರೆಸ್ ನೇತಾರ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ದೇಶ ಅಪಾಯದಲ್ಲಿದೆ: ಫರೂಕ್ ಅಬ್ದುಲ್ಲಾ
ಮಮತಾ ಬ್ಯಾನರ್ಜಿ ಅವರ ಆರೋಪ ಸರಿ ಇದೆ.ನಮ್ಮ ದೇಶ ಅಪಾಯದಲ್ಲಿದ್ದು, ಇಲ್ಲಿ ಸರ್ವಾಧಿಕಾರ ನಡೆಯುತ್ತಿದೆ.ಕೇಂದ್ರ ಸರ್ಕಾರ ಈ ದೇಶದ ಒಡೆಯರಲ್ಲ, ಇಲ್ಲಿ ಜನರೇ ಪ್ರಭುಗಳು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಸಿಬಿಐ ಅನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ: ಅಖಿಲೇಶ್ ಯಾದವ್
ಪಶ್ಚಿಮ ಬಂಗಾಳದಲ್ಲಿ ನಡೆದಂತೆ ಇತರ ರಾಜ್ಯಗಳಲ್ಲಿಯೂ ಇಂಥಾ ಘಟನೆಗಳು ನಡೆಯುತ್ತಿವೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿಬಿಐನ್ನು ದುರ್ಬಳಕೆ ಮಾಡುತ್ತಿವೆ.ನಾನು ಅಥವಾ ಸಮಾಜವಾದಿ ಪಕ್ಷ ಮಾತ್ರ ಈ ಮಾತನ್ನು ಹೇಳುತ್ತಿಲ್ಲ.ಎಲ್ಲ ರಾಜಕೀಯ ಪಕ್ಷಗಳು ಇದನ್ನು ಹೇಳುತ್ತಿವೆ ಎಂದು ಸಂಸತ್‍ನ ಹೊರಗೆ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ADVERTISEMENT

ಸಿಬಿಐ ನಿರ್ದೇಶಕರ ಬಗ್ಗೆ ಕೇಂದ್ರ ಭಯ ಪಟ್ಟಿತ್ತು.ಆದರೆ ಈಗ ಕೇಂದ್ರ ಸರ್ಕಾರ ಸಿಬಿಐನ್ನು ಬಳಸಿ ಎಲ್ಲರನ್ನೂ ಹೆದರಿಸುತ್ತಿದೆ. ಇಲ್ಲಿಯವರೆಗೆ ಯಾರಾದರೂ ಈ ಸಂಸ್ಥೆಯನ್ನು ದುರ್ಬಳಕೆ ಮಾಡಿದ್ದಾರಾ? ಈ ಸಂಸ್ಥೆಯನ್ನು ರಾಜಕೀಯವಾಗಿ ಬಳಸಿದ್ದು ಎಂದರೆ ಅದು ಬಿಜೆಪಿ ಮಾತ್ರ ಎಂದು ಅಖಿಲೇಶ್ ಹೇಳಿರುವುದಾಗಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.