ADVERTISEMENT

ಆಗ್ರಾ: ಆಮ್ಲಜನಕ ಪೂರೈಕೆ ಕಡಿತಕ್ಕೆ ಪುರಾವೆಯಿಲ್ಲ– ತನಿಖೆ ನಡೆಸಿದ ವೈದ್ಯರ ತಂಡ

22 ರೋಗಿಗಳ ಸಾವಿನ ಪ್ರಕರಣ

ಪಿಟಿಐ
Published 19 ಜೂನ್ 2021, 12:11 IST
Last Updated 19 ಜೂನ್ 2021, 12:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಗ್ರಾ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ 22 ರೋಗಿಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ವೈದ್ಯರ ತಂಡ, ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಕಡಿತಗೊಂಡಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳುವ ಮೂಲಕ ಕ್ಲೀನ್‌ ಚೀಟ್‌ ನೀಡಿದೆ.

ಪರಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಪೂರೈಕೆಯನ್ನು ಕಡಿತಗೊಳಿಸುವ ಅಣಕು ಪ್ರದರ್ಶನವನ್ನು ಆಸ್ಪತ್ರೆಯ ಮಾಲೀಕರು ಮಾಡಿದ್ದರು ಎಂದು ಹೇಳಲಾಗಿದ್ದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಆಗ್ರಾ ಜಿಲ್ಲಾಡಳಿತ ತನಿಖೆಗೆ ಆದೇಶಿಸಿತ್ತು.

ವೀಡಿಯೊದಲ್ಲಿ, ಆಸ್ಪತ್ರೆಯ ಮಾಲೀಕ ಡಾ.ಅರಿಂಜಯ್ ಜೈನ್, ಆಮ್ಲಜನಕದ ಪೂರೈಕೆಯನ್ನು ಸ್ಥಗಿತಗೊಳಿಸಿದ ನಂತರ 22 ರೋಗಿಗಳ ದೇಹಗಳು ನೀಲಿ ಬಣ್ಣಕ್ಕೆ ತಿರುಗಲು ಆರಂಭಿಸಿದವು ಎಂದು ಹೇಳಿದ್ದರು.

ADVERTISEMENT

ವೈದ್ಯರ ಸಮಿತಿಯು ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಿದ ವಿಚಾರಣಾ ವರದಿಯಲ್ಲಿ, ಆಸ್ಪತ್ರೆಯಲ್ಲಿ 5 ನಿಮಿಷ ಆಮ್ಲಜನಕ ಕಡಿತದ ಅಣಕು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ ಎಂದು ಉಲ್ಲೇಖಿಸಿದೆ.

ಏಪ್ರಿಲ್‌ 26–27ರಂದು ಸಹ ಆಸ್ಪತ್ರೆಯಲ್ಲಿ ಕಾಯಿಲೆ ಮತ್ತು ಇತರ ಸಮಸ್ಯೆಗಳಿಂದ 16 ರೋಗಿಗಳು ಮೃತಪಟ್ಟಿದ್ದಾರೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬಳಿಕ ಆಸ್ಪತ್ರೆಯನ್ನು ಮುಚ್ಚಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.