ADVERTISEMENT

‘ಪ್ರತಿಭಟನೆ ವೇಳೆ ರಸ್ತೆ ಬಂದ್‌ಗೆ ನಿರ್ಬಂಧ: ಕಾನೂನು ಪ್ರಸ್ತಾಪವಿಲ್ಲ’

ಪಿಟಿಐ
Published 11 ಮಾರ್ಚ್ 2020, 21:30 IST
Last Updated 11 ಮಾರ್ಚ್ 2020, 21:30 IST
ಜಿ.ಕಿಶನ್‌ ರೆಡ್ಡಿ
ಜಿ.ಕಿಶನ್‌ ರೆಡ್ಡಿ   

ನವದೆಹಲಿ: ಪ್ರತಿಭಟನೆ ಸಂದರ್ಭದಲ್ಲಿ ರಸ್ತೆ ಬಂದ್‌ ಮಾಡುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಕಾನೂನು ರಚಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್‌ ರೆಡ್ಡಿ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ ಈ ಸಂಬಂಧ ಲಿಖಿತ ಉತ್ತರ ನೀಡಿದ ಅವರು, ಸಿಎಎ ವಿರೋಧಿಸಿ ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನಾ ನಿರತರು ರಸ್ತೆ ಬಂದ್‌ ಮಾಡಿದ್ದನ್ನೂ ಉಲ್ಲೇಖಿಸಿದರು. ‘ಭವಿಷ್ಯದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಸಂಬಂಧ ಕಾನೂನು ಜಾರಿಗೊಳಿಸುವ ಪ್ರಸ್ತಾವ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಶಾಹೀನ್‌ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಪರಿಣಾಮವಾಗಿ ಸಾಮಾನ್ಯ ಜನತೆಗೆ ಎಷ್ಟು ನಷ್ಟವುಂಟಾಗಿದೆ ಎಂಬುದರ ಮೌಲ್ಯಮಾಪನ ನಡೆದಿಲ್ಲ’ ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.