ADVERTISEMENT

ಆನ್‌ಲೈನ್‌ ಬಳಕೆ: ಸಿಬಿಎಸ್‌ಇ ಎಚ್ಚರಿಕೆ

ಪಿಟಿಐ
Published 24 ಮೇ 2020, 19:41 IST
Last Updated 24 ಮೇ 2020, 19:41 IST
   

ನವದೆಹಲಿ: ಆನ್‌ಲೈನ್‌ ಮೂಲಕ ಗೆಳೆತನ, ಸಂವಹನ ತಪ್ಪಲ್ಲ. ಆದರೆ, ಈ ವಿಷಯದಲ್ಲಿ ವಿದ್ಯಾರ್ಥಿಗಳು ಮಿತಿಮೀರಿ ವರ್ತಿಸಬಾರದು. ಆನ್‌ಲೈನ್‌ ಮೂಲಕ ಪದಗಳು, ಚಿತ್ರಗಳು ಅಥವಾ ವಿಡಿಯೊಗಳನ್ನು ಹಂಚಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ಅಗತ್ಯ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದೆ.

ಲಾಕ್‌ಡೌನ್‌ ಹೇರಿದಾಗಿನಿಂದ ಆನ್‌ಲೈನ್‌ ಮೂಲಕ ಕಲಿಕೆ ವ್ಯಾಪಕವಾಗುತ್ತಿದೆ. ದೆಹಲಿಯಲ್ಲಿ ‘ಬಾಯ್ಸ್‌ ಲಾಕರ್‌ ರೂಮ್‌’ ಎಂಬ ಇನ್‌ಸ್ಟಾಗ್ರಾಂ ಗ್ರೂಪ್‌ನಲ್ಲಿ ಬಾಲಕಿಯರ ಚಿತ್ರಗಳನ್ನು, ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆದದ್ದು ಬಹಿರಂಗಗೊಂಡ ಬೆನ್ನಲ್ಲೇ, ಸಿಬಿಎಸ್‌ಇ ಇಂತಹ ಎಚ್ಚರಿಕೆ ನೀಡಿದೆ.

ಸೈಬರ್‌ ಸುರಕ್ಷತೆ ಕುರಿತು9ರಿಂದ 12ನೇ ತರಗತಿ ವಿದ್ಯಾರ್ಥಿ
ಗಳಿಗೆ ಸಿಬಿಎಸ್‌ಇ ಕೈ‍ಪಿಡಿಯೊಂದನ್ನು ನೀಡಿದ್ದು,ಅಶ್ಲೀಲ ಚಿತ್ರ, ಪದಗಳನ್ನು ಬಳಸುವ ಮೂಲಕ ವ್ಯಕ್ತಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ವಿರುದ್ಧವೂ ಎಚ್ಚರಿಕೆ ನೀಡಿದೆ.

ADVERTISEMENT

ಅಶ್ಲೀಲ ಚಿತ್ರಗಳು, ವಿಡಿಯೊಗಳನ್ನು ಒಮ್ಮೆ ಅಪ್‌ಲೋಡ್‌ ಮಾಡಿದರೆ ಆಯಿತು, ಅವುಗಳ ಮೇಲೆ ಯಾರಿಗೂ ನಿಯಂತ್ರಣ ಸಿಗದು. ಅವುಗಳನ್ನು ಯಾರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಇದರಿಂದ ವ್ಯಕ್ತಿಯ
ಚಾರಿತ್ರ್ಯವಧೆಯಾಗುತ್ತದೆ ಎಂದೂ ಎಚ್ಚರಿಸಲಾಗಿದೆ.

‘ಹುಡುಗಿಯರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಹುಡುಗರು ಕಲಿತುಕೊಳ್ಳಬೇಕು. ವ್ಯಕ್ತಿಯಿಂದ ತಿರಸ್ಕರಿಲ್ಪಟ್ಟಾಗ, ಅದನ್ನು ಜೀವನದ ಒಂದು ಭಾಗವೆಂದೇ ತಿಳಿಯಬೇಕು. ಅದು ಬದುಕಿನ ಕೊನೆ ಎಂದು ಭಾವಿಸಿ, ಅನಾಹುತ ಮಾಡಿಕೊಳ್ಳಬಾರದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.