ADVERTISEMENT

ನೊಯಿಡಾ | ಸಂಚಾರಿ ನಿಯಮ ಉಲ್ಲಂಘನೆ: ಚಾಲಕ ಬಂಧನ

ಪಿಟಿಐ
Published 16 ಆಗಸ್ಟ್ 2025, 14:25 IST
Last Updated 16 ಆಗಸ್ಟ್ 2025, 14:25 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ನೊಯಿಡಾ: ಕುಟುಂಬವೊಂದನ್ನು ಒತ್ತೆಯಾಳಾಗಿ ಇರಿಸಿಕೊಂಡು, ಸಂಚಾರಿ ನಿಯಮ ಉಲ್ಲಂಘಿಸಿ ವೇಗವಾಗಿ ಹೋಗುತ್ತಿದ್ದ ಕ್ಯಾಬ್‌ ಚಾಲಕನನ್ನು ನೊಯಿಡಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ADVERTISEMENT

ಪೊಲೀಸರು ವಾಹನ ನಿಲ್ಲಿಸುವಂತೆ ತಿಳಿಸಿದರೂ ಸೂಚನೆ ಪಾಲಿಸದೆ ಉದ್ದೇಶಪೂರ್ವಕವಾಗಿ ಬ್ಯಾರಿಕೇಡ್‌ಗಳನ್ನು ತಳ್ಳಿ  ಹೋಗಿದ್ದಾನೆ. ಚಾಲಕನ ವರ್ತನೆಯಿಂದ ಸಂಶಯಗೊಂಡ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ಕ್ಯಾಬ್‌ನಲ್ಲಿ ನಾಲ್ಕು ವರ್ಷದ ಮಗುವಿನೊಂದಿಗೆ ದಂಪತಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರು ವಾಹನ ನಿಲ್ಲಿಸುವಂತೆ ಚಾಲಕನಿಗೆ ಹೇಳಿದರೂ ಆತ ಲೆಕ್ಕಿಸದೆ ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. 

ಟಿ.ಆರ್‌. ನಗರದ ಬಳಿ ಪ್ರಯಾಣಿಕರನ್ನು ಇಳಿಸಿ, ಚಾಲಕ ನಾಪತ್ತೆಯಾಗಿದ್ದಾನೆ. ಈ ಸಂಪೂರ್ಣ ಘಟನೆಯನ್ನು ಪ್ರಯಾಣಿಕರು ರೆಕಾರ್ಡ್‌ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರ ಹಂಚಿಕೊಂಡಿದ್ದರು. ಇದು ಆರೋಪಿಯನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯಕವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ಚಾಲಕನನ್ನು ನಾಸಿಮ್‌ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನ ಬಳಿ ಎರಡು ವಿಭಿನ್ನ ಹೆಸರಿನ ಆಧಾರ್‌ ಕಾರ್ಡ್‌ ಇತ್ತು. ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ₹29,500 ದಂಡ ವಿಧಿಸಲಾಗಿದೆ’ ಎಂದು ಡಿಸಿಪಿ ಶಕ್ತಿ ಮೋಹನ್‌ ಅವಸ್ಥಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.