ADVERTISEMENT

ಕಳೆದ 10 ವರ್ಷಗಳಲ್ಲಿ ಯಾರೊಬ್ಬರೂ ಹಸಿವಿನಿಂದ ಸತ್ತಿಲ್ಲ: ಬಿಜೆಪಿ ಮುಖಂಡ ಬಘೇಲ

ಪಿಟಿಐ
Published 2 ಫೆಬ್ರುವರಿ 2024, 13:36 IST
Last Updated 2 ಫೆಬ್ರುವರಿ 2024, 13:36 IST
<div class="paragraphs"><p>ಎಸ್‌.ಪಿ.ಸಿಂಗ್ ಬಘೇಲ</p></div>

ಎಸ್‌.ಪಿ.ಸಿಂಗ್ ಬಘೇಲ

   

ನವದೆಹಲಿ: ‘ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಯಾರೊಬ್ಬರೂ ಹಸಿವಿನಿಂದ ಸತ್ತಿಲ್ಲ’ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವ ಎಸ್‌.ಪಿ.ಸಿಂಗ್ ಬಘೇಲ ಹೇಳಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಸಂದರ್ಭದಲ್ಲಿ ‘ಬಡತನ ನಿರ್ಮೂಲನೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ವಿರುದ್ಧ ಹರಿಹಾಯ್ದರು.

ADVERTISEMENT

‘‘ಮುಗ್ಧ ಪ್ರಧಾನಿ‘ ಎಂದೇ ಗುರುತಿಸಿಕೊಂಡಿದ್ದ ರಾಜೀವ್ ಗಾಂಧಿ, ಭ್ರಷ್ಟಾಚಾರ ತಡೆಯುವಲ್ಲಿ ವಿಫಲರಾಗಿ ತಮ್ಮನ್ನು ತಾವು ಅಸಮರ್ಥ ಎಂದೂ ಸಾಬೀತುಪಡಿಸಿದ್ದರು. ಅವರಂತೆಯೇ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ‘ಗರೀಬಿ ಹಠಾವೊ’ ಎಂದು ಘೋಷಣೆ ಕೂಗಿದರೇ ವಿನಃ ಅದರ ನಿರ್ಮೂಲನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದಾರೆ.

‘ಈ ದೇಶವನ್ನು ಯಾರಾದರೂ ವಂಚಿಸಿದ್ದರೆ, ಅದು ‘ಗರೀಬಿ ಹಠಾವೊ’ ಹೇಳಿಕೆ ನೀಡಿದ ಇಂದಿರಾ ಗಾಂಧಿ ಮಾತ್ರ. ಒಂದೊಮ್ಮೆ ಬಡತ ನಿರ್ಮೂಲನೆ ಆಗಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ.ಜಿ. ಅಕ್ಕಿ ಮತ್ತು ಗೋಧಿ ನೀಡುತ್ತಿರುವ ಈ 80 ಕೋಟಿ ಜನ ಯಾರು’ ಎಂದು ಪ್ರಶ್ನಿಸಿದ್ದಾರೆ.

’ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಕಳೆದ 10 ವರ್ಷಗಳಲ್ಲಿ ಯಾರೊಬ್ಬರೂ ಹಸಿವಿನಿಂದ ಸತ್ತಿಲ್ಲ. ಏಕೆಂದರೆ ಅವರೆಲ್ಲರಿಗೂ ಉಚಿತವಾಗಿ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ಇದು ಮುಂದಿನ 5 ವರ್ಷಗಳಿಗೂ ಮುಂದುವರಿಯುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಬಘೇಲ ಹೇಳಿದ್ದಾರೆ.

ತ್ರಿವಳಿ ತಲಾಖ್ ನಿಷೇಧಿಸಿದ ಸರ್ಕಾರದ ಕ್ರಮವನ್ನು ಉಲ್ಲೇಖಿಸಿದ ಸಚಿವ ಬಘೇಲ, ‘ಈಗ ಮೂರು ಬಾರಿ ತಲಾಖ್ ಹೇಳುವುದು ನಡೆಯದು. ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ. ಮೇನಲ್ಲಿ 400 ಸೀಟುಗಳೊಂದಿಗೆ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.