ADVERTISEMENT

ಪ್ರಕರಣಗಳ ವಿಚಾರಣೆ ಬಾಕಿ: ನ್ಯಾಯಾಧೀಶರ ತಪ್ಪಲ್ಲ, ವ್ಯವಸ್ಥೆಯಲ್ಲಿ ದೋಷ– ರಿಜಿಜು

ಪಿಟಿಐ
Published 25 ಫೆಬ್ರುವರಿ 2023, 14:35 IST
Last Updated 25 ಫೆಬ್ರುವರಿ 2023, 14:35 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ಉದಯಪುರ: ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಇರಲು ನ್ಯಾಯಾಧೀಶರು ಕಾರಣರಲ್ಲ, ವ್ಯವಸ್ಥೆಯಲ್ಲಿಯೇ ದೋಷವಿದೆ. ಇದನ್ನು ಸರಿಪಡಿಸಲು ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಭಾರತೀಯ ಕಾನೂನು ಆಯೋಗವು ಇಲ್ಲಿನ ಮೋಹನ್‌ಲಾಲ್‌ ಸುಖಾದಿಯಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಪ್ರಸ್ತುತ ಮತ್ತು ಅನವಶ್ಯಕ ಕಾನೂನುಗಳನ್ನು ರದ್ದುಗೊಳಿಸುವ ಪ್ರಯತ್ನಗಳ ಬಗ್ಗೆ ಮಾತನಾಡಿದರು.

‘ನ್ಯಾಯಾಲಯಗಳ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ಹೆಚ್ಚು ತಂತ್ರಜ್ಞಾನ ಬಳಕೆ ಮಾಡಲು ಪ್ರಯತ್ನಿಸಲಾಗುತ್ತಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇರಲೇಬೇಕಾದ ವ್ಯವಸ್ಥೆಯತ್ತ ನಾವು ಸಾಗುತ್ತಿದ್ದೇವೆ’ ಎಂದು ಸಚಿವರು ಹೇಳಿದರು.

ADVERTISEMENT

‘ಸದ್ಯ ದೇಶದಾದ್ಯಂತ ವಿಚಾರಣೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 4.90 ಕೋಟಿ ದಾಟಿದೆ. ಇದಕ್ಕೆ ಹಲವಾರು ಕಾಣಗಳಿವೆ. ಒಬ್ಬ ನ್ಯಾಯಾಧೀಶರು ದಿನಕ್ಕೆ 50–60 ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ. ಸಾಮಾನ್ಯ ಜನರು, ಏಕೆ ಇಷ್ಟೊಂದು ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದು ಕೇಳುತ್ತಾರೆ. ನ್ಯಾಯಾಧೀಶರು ಎಷ್ಟು ಕೆಲಸ ಮಾಡುತ್ತಾರೆಂದು ಅವರಿಗೆ ಗೊತ್ತಿಲ್ಲ. ಇದು ವ್ಯವಸ್ಥೆಯ ದೋಷ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.