ನವದೆಹಲಿ: ನ್ಯಾಷನಲ್ ಹೆರಾಲ್ಡ್‌ನ ಪ್ರಕರಣದಲ್ಲಿ ಸ್ಥಿರಾಸ್ತಿಯನ್ನು ತನ್ನ ಸುಪರ್ದಿಗೆ ಪಡೆಯಲು ನೋಟಿಸ್ ಜಾರಿಗೊಳಿಸಿರುವ ಕ್ರಮವನ್ನು ‘ಪ್ರಜಾಪ್ರಭುತ್ವದ ಮೇಲಿನ ಹಲ್ಲೆ’ ಎಂದು ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸಲು ಆಡಳಿತರೂಢ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮುಖಂಡರಾದ ಅವರು ಭಾನುವಾರ ಆರೋಪಿಸಿದರು.
‘ಹೇಳಿಕೊಳ್ಳಲು ನಮ್ಮದು ಪ್ರಜಾಪ್ರಭುತ್ವದ ತಾಯಿ. ವಾಸ್ತವದಲ್ಲಿ ಅದು ನಿರಂಕುಶಾಡಳಿತದ ತಂದೆಯಂತೆ ಕಾಣುತ್ತಿದೆ. ಪ್ರತಿಪಕ್ಷಗಳನ್ನು ಹಕ್ಕಿಕ್ಕಲು ಬಿಜೆಪಿ ಹಿಂದೂ–ಮುಸ್ಲಿಂ ರಾಜಕಾರಣದ ಕಾರ್ಯಸೂಚಿ ಹೊಂದಿದೆ’ ಎಂದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ‘ನ್ಯಾಷನಲ್ ಹೆರಾಲ್ಡ್’ ದಿನಪತ್ರಿಕೆ ಮತ್ತು ಅಸೋಸಿಯೇಟೆಡ್ ಜನರಲ್ ಲಿಮಿಟೆಡ್‌ಗೆ (ಎಜೆಎಲ್) ಸೇರಿದ ₹661 ಕೋಟಿ ಮೌಲ್ಯದ ಆಸ್ತಿ ಸುಪರ್ದಿಗೆ ಪಡೆಯಲು ಇ.ಡಿ ನೋಟಿಸ್ ಜಾರಿ ಮಾಡಿದ್ದನ್ನು ಉಲ್ಲೇಖಿಸಿ ಈ ಟೀಕೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.