ADVERTISEMENT

ಗಮನ ಸೆಳೆದ ಟೊಮೆಟೋ, ಮರಳಿನ ಸಾಂಟಾ ಕಲಾಕೃತಿ

ಪಿಟಿಐ
Published 25 ಡಿಸೆಂಬರ್ 2022, 11:49 IST
Last Updated 25 ಡಿಸೆಂಬರ್ 2022, 11:49 IST
ಸಾಂತಾ ವೇಷಧಾರಿ (ಪಿಟಿಐ ಚಿತ್ರ)
ಸಾಂತಾ ವೇಷಧಾರಿ (ಪಿಟಿಐ ಚಿತ್ರ)   

ಗೋಪಾಲ್‌ಪುರ (ಒಡಿಶಾ): ಅಂತರರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್‌ ಪಟ್ನಾಯಕ್‌ ಅವರು ಕ್ರಿಸ್‌ಮಸ್‌ ಪ್ರಯುಕ್ತ ಭಾನುವಾರ ಗೋಪಾಲ್‌ಪುರದ ಸಮುದ್ರದ ದಂಡೆಯ ಮೇಲೆ ಮರಳು ಮತ್ತು ಟೊಮೆಟೊದಿಂದ ರಚಿಸಿದ್ದ 27 ಅಡಿಯ ಸಾಂಟಾಕಲಾಕೃತಿ ಎಲ್ಲರ ಕಣ್ಸೆಳೆಯಿತು.

ಇದು ಟೊಮೆಟೊ ಮತ್ತು ಮರಳಿನಿಂದ ನಿರ್ಮಿಸಿದ ಜಗತ್ತಿನ ಅತಿದೊಡ್ಡ ಕಲಾಕೃತಿಯಾಗಿದ್ದು, 1.5 ಟನ್ ತೂಕ ಮತ್ತು 60 ಅಡಿ ಅಗಲವಿದೆ. ಇದನ್ನು15 ಜನ ವಿದ್ಯಾರ್ಥಿಗಳ ಸಹಾಯದೊಂದಿಗೆ ರೂಪಿಸಲಾಗಿದೆ ಎಂದು ಪಟ್ನಾಯಕ್‌ ತಿಳಿಸಿದ್ದಾರೆ.

ಈ ಹಿಂದೆ ಕೂಡ ಕ್ರಿಸ್‌ಮಸ್‌ ಅಂಗವಾಗಿ ನಿರ್ಮಿಸಿದ ಸಾಂಟಾ ಕಲಾಕೃತಿಯಲ್ಲಿ ದಾಖಲೆ ನಿರ್ಮಿಸಿದ್ದೆವು. ಈ ಬಾರಿ ಟೊಮೆಟೊ ಮತ್ತು ಮರಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ಕುರಿತು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಟ್ನಾಯಕ್‌ ಈ ಹಿಂದೆ ಭಾರತ ಜಿ–20ಯ ಅಧ್ಯಕ್ಷತೆಯನ್ನು ಪಡೆದುಕೊಂಡಾಗಲೂ ಮರಳಿನಿಂದ ಲೋಗೋ ತಯಾರಿಸಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.