ನವದೆಹಲಿ (ಪಿಟಿಐ): ಇತ್ತೀಚೆಗೆ ವಿಮಾನಗಳು ರನ್‌ವೇಯಿಂದ ಜಾರಿದ ಆರು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) 12 ಪೈಲಟ್‌ಗಳಿಗೆ ಗುರುವಾರ ಷೋಕಾಸ್ ನೋಟಿಸ್ ನೀಡಿದೆ.
ಸ್ಪೈಸ್ ಜೆಟ್‌ನ ಮೂರು, ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡು ಮತ್ತು ಗೋ ಏರ್ ನ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ 12 ಪೈಲಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.
ಸೋಮವಾರ ರಾತ್ರಿ ಭಾರೀ ಮಳೆಯ ನಡುವೆ ಜೈಪುರದಿಂದ ಬಂದ ಸ್ಪೈಸ್‌ಜೆಟ್‌ನ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದಾಗ ರನ್ ವೇಯಿಂದ ಜಾರಿದ್ದು, ಮುಂಬೈ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯನ್ನೇ ಮುಚ್ಚಬೇಕಾಯಿತು. ಇದರ ಬೆನ್ನಲ್ಲೇ ಡಿಜಿಸಿಎ ಈ ಸೂಚನೆ ನೀಡಿದೆ. ಪೈಲಟ್‌ಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಸ್ಪೈಸ್‌ಜೆಟ್‌ನ ವಕ್ತಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.