ADVERTISEMENT

ಚಂಡೀಗಡದ ಬುರೈಲ್ ಜೈಲಿನ ಬಳಿ ಸ್ಪೋಟಕ ಪತ್ತೆ: ಎನ್‌ಎಸ್‌ಜಿಯಿಂದ ನಿಷ್ಕ್ರಿಯ

ಪಿಟಿಐ
Published 24 ಏಪ್ರಿಲ್ 2022, 14:25 IST
Last Updated 24 ಏಪ್ರಿಲ್ 2022, 14:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ಇಲ್ಲಿನ ಬುರೈಲ್ ಜೈಲಿನ ಆವರಣ ಗೋಡೆಯ ಬಳಿ ಬ್ಯಾಗ್‌ವೊಂದರಲ್ಲಿ ಸ್ಪೋಟಕ ವಸ್ತು ಪತ್ತೆಯಾಗಿದ್ದು, ರಾಷ್ಟ್ರೀಯ ಭದ್ರತಾ ಪಡೆಯ ಸಿಬ್ಬಂದಿ (ಎನ್‌ಎಸ್‌ಜಿ) ಅದನ್ನು ಭಾನುವಾರ ನಿಷ್ಕ್ರಿಯಗೊಳಿಸಿದ್ದಾರೆ.

‘ಶನಿವಾರ ಸಂಜೆ ಬ್ಯಾಗ್‌ ಪತ್ತೆಯಾಗಿದೆ. ಅದರಲ್ಲಿಪೆಟ್ಟಿಗೆ, ಸುಟ್ಟ ವಯರ್‌ಗಳು ಮತ್ತು ಸ್ಪೋಟಕ ವಸ್ತುಗಳು ಇದ್ದವು. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಚಂಡಿಗಡದ ಎಸ್‌ಎಸ್‌ಪಿ ಕುಲದೀಪ್‌ ಚಹಲ್‌ ಅವರು ಹೇಳಿದ್ದಾರೆ.

‍ಈಗಾಗಲೇ ಜೈಲು ಆವರಣವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಗ್ನಿಶಾಮಕ ವಾಹನವನ್ನು ಅಲ್ಲಿ ನಿಯೋಜಿಸಲಾಗಿದೆ. ಜೈಲಿನ ಬಳಿಯ ರಸ್ತೆಯಲ್ಲಿ ಜನರ ಹಾಗೂ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.