ADVERTISEMENT

ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ –4 ಕ್ಷಿಪಣಿ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 17:47 IST
Last Updated 6 ಜೂನ್ 2022, 17:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಮಾರು ನಾಲ್ಕು ಸಾವಿರ ಕಿ.ಮೀ. ದೂರದ ಗುರಿಯತ್ತ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಅಗ್ನಿ–4 ಬ್ಯಾಲೆಸ್ಟಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಭಾನುವಾರ ಯಶಸ್ವಿಯಾಗಿ ನಡೆಯಿತು.

‘ಇದು ಕಾರ್ಯತಂತ್ರ ಪಡೆಗಳ ಕಮಾಂಡ್‌ನ ಆಶ್ರಯದಲ್ಲಿ ನಡೆಸಲಾದ ವಾಡಿಕೆಯ ಪರೀಕ್ಷೆ. ಕ್ಷಿಪಣಿ ಬಳಕೆ ತರಬೇತಿಗಾಗಿ ನಡೆಸುವ ಉಡಾವಣೆಗಳ ಮತ್ತು ದೇಶದ ನೀತಿಯ ಕನಿಷ್ಠ ರಕ್ಷಣಾ ಸಾಮರ್ಥ್ಯದ ಭಾಗವಾಗಿತ್ತು’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT