ADVERTISEMENT

ಕಾಂಗ್ರೆಸ್‌,ಎಸ್‌ಪಿ, ಬಿಎಸ್‌ಪಿ ಜನರ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿವೆ: ಮೋದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 18:36 IST
Last Updated 5 ಏಪ್ರಿಲ್ 2019, 18:36 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಭಯೋತ್ಪಾದಕರಿಗೆ ಅರ್ಥವಾಗುವ ಭಾಷೆಯಲ್ಲೇ ಅವರಿಗೆ ಉತ್ತರ ನೀಡುವುದನ್ನು ಕೆಲವರು ಇಷ್ಟಪಡುವುದಿಲ್ಲ. ದೇಶದೊಳಗೆ ಭಯೋತ್ಪಾದಕರು ದಾಳಿ ನಡೆಸಿದಾಗ ನಾನು ಸುಮ್ಮನೆ ಕುಳಿತುಕೊಳ್ಳಬೇಕೇ? ಜಗತ್ತಿನ ಮುಂದೆ ಪಾಕಿಸ್ತಾನದ ಬಣ್ಣ ಬಯಲಾದಾಗ ‘ಇವರು’ ಆ ದೇಶದ ಪರ ಮಾತನಾಡಿ ಅವರ (ಪಾಕಿಸ್ತಾನದ) ದೃಷ್ಟಿಯಲ್ಲಿ ಹೀರೊ ಆಗಬೇಕೆಂದು ಸ್ಪರ್ಧೆಗೆ ಬೀಳುತ್ತಾರೆ. ಕಾಂಗ್ರೆಸ್‌, ಎಸ್‌ಪಿ,ಬಿಎಸ್‌ಪಿಜನರ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿವೆ

ನರೇಂದ್ರ ಮೋದಿ, ಪ್ರಧಾನಿ

***

ADVERTISEMENT

ಹೊಸ ನಾಟಕದಲ್ಲಿ ‘ಚೌಕೀದಾರನ’ ಪಾತ್ರ ಮಾಡಿರುವ ‘ಚಾಯ್‌ವಾಲಾ’ನನ್ನು ಮುಂದಿನ ಚುನಾವಣೆಯಲ್ಲಿ ಜನರು ತಿರಸ್ಕರಿಸುತ್ತಾರೆ ಎಂಬುದರಲ್ಲಿ ಸಂದೇಹ ಬೇಡ. ಬಿಜೆಪಿಯೂ ಈಗ ಕಾಂಗ್ರೆಸ್‌ನ ಹಾದಿಯನ್ನು ಹಿಡಿದಿದೆ. 70 ವರ್ಷ ದೇಶವನ್ನು ಆಳಿದ್ದ ಕಾಂಗ್ರೆಸ್‌, ಸಾಮಾಜಿಕ ನ್ಯಾಯ ಪಾಲಿಸುವಲ್ಲಿ ಮತ್ತು ದುರ್ಬಲ ವರ್ಗದವರನ್ನು ಮೇಲೆತ್ತುವಲ್ಲಿ ಸಂಪೂರ್ಣ ವಿಫಲವಾಗಿದೆ

ಮಾಯಾವತಿ, ಬಿಎಸ್‌ಪಿ ಅಧ್ಯಕ್ಷೆ

***

ನಾನು ಶಿವಾಜಿ ಹುಟ್ಟಿದ ನಾಡಿನಿಂದ ಬಂದವನು. ಯಾರ್‍ಯಾರೋ ಮಾಡುವ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವವನಲ್ಲ. ಅರಬ್ಬಿ ಸಮುದ್ರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಯೋಜನೆಯ ‘ಜಲಪೂಜೆ’ಗೆ ಪ್ರಧಾನಿ ₹ 18 ಕೋಟಿ ಖರ್ಚು ಮಾಡಿದರು. ಶಿವಾಜಿ ಹೆಸರಿನಲ್ಲಿ ಆಡಳಿತ ನಡೆಸುವ ಸರ್ಕಾರ ಈವರೆಗೆ ಒಂದೇ ಒಂದು ಇಟ್ಟಿಗೆಯನ್ನೂ ಇಟ್ಟಿಲ್ಲ

ಶರದ್‌ ಪವಾರ್‌, ಎನ್‌ಸಿಪಿ ಮುಖಂಡ

***

ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಗೆ ಮೋದಿ ಮಾಡಿರುವ ಖರ್ಚು ₹ 100 ಕೋಟಿ ಮಾತ್ರ. 130 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ತಲಾ ಒಂದು ರೂಪಾಯಿಯೂ ಆಗುವುದಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ‘ಕನ್ಯಾಶ್ರೀ’ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡಿದೆ. ನಮ್ಮ ಯೋಜನೆಗೆ ‘ಯುನೈಟೆಡ್‌ ನೇಷನ್ಸ್‌ ಪಬ್ಲಿಕ್‌ ಸರ್ವಿಸ್‌ ಅವಾರ್ಡ್‌’ ಲಭಿಸಿದೆ. ಮೋದಿಯ ಯೋಜನೆ ವಿಫಲವಾಗಿದೆ

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.