ADVERTISEMENT

ಒಡಿಶಾ: ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಮುಟ್ಟಿನ ರಜೆ ಘೋಷಣೆ

ಪಿಟಿಐ
Published 15 ಆಗಸ್ಟ್ 2024, 10:13 IST
Last Updated 15 ಆಗಸ್ಟ್ 2024, 10:13 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭುವನೇಶ್ವರ: ಒಡಿಶಾ ಸರ್ಕಾರವು 78ನೇ ಸ್ವಾತಂತ್ರ್ಯೋತ್ಸವದ ದಿನ ಮಹಿಳೆಯರಿಗೆ ವೇತನ ಸಹಿತ (ಪಿಎಂಎಲ್‌) ಮುಟ್ಟಿನ ರಜೆಯನ್ನು ಘೋಷಿಸಿದೆ.

‘ಈ ರಜೆಯನ್ನು ಮುಟ್ಟಿನ ಮೊದಲ ಅಥವಾ ಎರಡನೇ ದಿನದಂದು ತೆಗೆದುಕೊಳ್ಳಬಹುದು. ಈ ರಜೆಯು ಸಂಪೂರ್ಣ ಐಚ್ಛಿಕವಾಗಿರಲಿದೆ. ಮಹಿಳೆಯರು ಈ ರಜೆಯನ್ನು ತೆಗೆದುಕೊಳ್ಳದೆಯೂ ಇರಬಹುದು’ ಎಂದು ಕಠಕ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಉಪ ಮುಖ್ಯಮಂತ್ರಿ ಪ್ರವ್ತಿ ಪರಿದಾ ಅವರು ಹೇಳಿದರು. ಪ್ರವ್ತಿ ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯೂ ಆಗಿದ್ದಾರೆ.

ADVERTISEMENT

ಕೀನ್ಯಾದಲ್ಲಿ ವಿಶ್ವ ಸಂಸ್ಥೆಯ ‘ಸಿವಿಲ್‌ ಸೊಸೈಟಿ ಕಾನ್ಫರೆನ್ಸ್‌ 2024’ರಲ್ಲಿ ಭಾಗವಹಿಸಿದ್ದ ಒಡಿಶಾದ ಬಾಲಕಿಯೊಬ್ಬಳು, ವೇತನ ಸಹಿತ ಮುಟ್ಟಿನ ರಜೆ ನೀಡಬೇಕು ಎಂಬುದರ ಕುರಿತು ಮಾತನಾಡಿದ್ದಳು. ಮಹಿಳಾಪರ ಹೋರಾಟಗಾರ್ತಿ ಒಡಿಶಾದ ರಂಜಿತಾ ಪ್ರಿಯದರ್ಶಿನಿ ಅವರು ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.