
ಕಟಕ್ (ಒಡಿಶಾ): ಜಾತ್ರೆಯ ತೊಟ್ಟಿಲೊಂದು ಅರ್ಧಕ್ಕೆ ನಿಂತಿದ್ದರಿಂದ ಕನಿಷ್ಠ 8 ಮಂದಿ 30 ಅಡಿ ಎತ್ತರದಲ್ಲಿ ಸಿಲುಕಿದ ಘಟನೆ ಕಟಕ್‌ನ ಬಲಿ ಜಾತ್ರೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ 11 ಗಂಟೆ ವೇಳೆಗೆ ಘಟನೆ ನಡೆದಿದ್ದು, ತೊಟ್ಟಿಲು ಏಕಾಏಕಿ ನಿಂತು ಬಿಟ್ಟಿದೆ ಎಂದು ಅವರು ಹೇಳಿದ್ದಾರೆ.
ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿ, ತೊಟ್ಟಿಲಿನಲ್ಲಿ ಸಿಲುಕಿಕೊಂಡಿದ್ದವರನ್ನು ಹೈಡ್ರೊಲಿಕ್ ಏಣಿ ಬಳಸಿ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗಂಟೆಗೂ ಅಧಿಕ ಸಮಯ ಉಯ್ಯಾಲೆಯಲ್ಲಿ ಸಿಲುಕಿಕೊಂಡಿದ್ದರಿಂದ ಅವರು ಭಯಭೀತರಾಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಕಟಕ್ ಡಿಸಿಪಿ ಖಿಲಾರಿ ರಿಷಿಕೇಶ್ ನ್ಯಾನ್‌ದೇವ್ ಹಾಗೂ ಇತರ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗೆ ವೇಲ್ವಿಚಾರಣೆ ನಡೆಸಿದ್ದಾರೆ.
ತೊಟ್ಟಿಲಿನಲ್ಲಿ ಸಿಲುಕಿಕೊಂಡ ಎಲ್ಲರನ್ನೂ ರಕ್ಷಿಸಲಾಗಿದೆ. ಬಳಿಕ ಅವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.