
ಮಾಲ್ಕಾನಗಿರಿ: ನಕ್ಸಲ್ ನಾಯಕ ಸುಕರಾಮ್ ಮಾರ್ಕಮ್ ಪೊಲೀಸರ ಮುಂದೆ ಶರಣಾಗುವುದರೊಂದಿಗೆ ನಕ್ಸಲರ ತಾಣವೆಂದು ಪರಿಗಣಿಸಲಾಗಿದ್ದ ಒಡಿಶಾದ ಮಾಲ್ಕಾನಗಿರಿಯನ್ನು ಬುಧವಾರ ‘ನಕ್ಸಲ್‌ಮುಕ್ತ’ ಜಿಲ್ಲೆ ಎಂದು ಘೋಷಿಸಲಾಯಿತು.
ನೆರೆಯ ಛತ್ತೀಸಗಢದಲ್ಲಿ ಒಂಬತ್ತು ನಕ್ಸಲರು ಇತ್ತೀಚೆಗೆ ಶರಣಾದ ನಂತರ ಒಡಿಶಾದ ನಬರಂಗಪುರ ಜಿಲ್ಲೆಯನ್ನು ನಕ್ಸಲ್‌ಮುಕ್ತ ಎಂದು ಘೋಷಿಸಲಾಗಿತ್ತು.
ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಪ್ರದೇಶ ಸಮಿತಿ ಸದಸ್ಯರಾಗಿದ್ದ ಮಾರ್ಕಮ್ ಒಂದು ಎಸ್‌ಎಲ್‌ಆರ್ ರೈಫಲ್, ಮದ್ದುಗುಂಡುಗಳು ಮತ್ತು ಇತರ ಶಸ್ತ್ರಾಸ್ತ್ರಗೊಂದಿಗೆ ಶರಣಾಗಿದ್ದಾರೆ ಎಂದು ಮಾಲ್ಕಾನಗಿರಿ ಎಸ್‌ಪಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಪುನರ್‌ವಸತಿ ನೀತಿಯಡಿಯಲ್ಲಿ ನೀಡಲಾಗುವ ಎಲ್ಲಾ ಪ್ರಯೋಜನಗಳನ್ನು ಮಾರ್ಕಮ್ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವರ ಸುಳಿವು ನೀಡಿದವರಿಗೆ ₹21 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.