ಯೋಧರು
ಸಾಂದರ್ಭಿಕ ಚಿತ್ರ
ಭುವನೇಶ್ವರ: ಗಾಂಜಾ ಹೊಂದಿದ್ದ ಆರೋಪದ ಮೇಲೆ ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿಎನ್)ನ ಮೂವರು ಯೋಧರನ್ನು ಬಂಧಿಸಲಾಗಿದ್ದು, ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಆರ್‌ಬಿಎನ್‌ನ 5ನೇ ಬೆಟಾಲಿಯನ್‌ನ ಕುನಾಲ್ ಸಿಂಗ್, ತ್ರಿಲೋಚನ್ ರಾಣಾ ಮತ್ತು ನಿಲಂ ಬಾರ್ಲಾ ಸೇವೆಯಿಂದ ವಜಾಗೊಂಡ ಯೋಧರು. ಅವರಿಂದ 15 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 25ರಂದು ಬೌಧ್ ಜಿಲ್ಲೆಯ ಯೋಧರ ಬ್ಯಾರಕ್‌ಗಳ ಮೇಲೆ ಒಡಿಶಾ ಪೊಲೀಸರು ದಾಳಿ ನಡೆಸಿದರು. ಶೋಧ ಕಾರ್ಯಾಚರಣೆ ವೇಳೆ ಕುನಾಲ್ ಸಿಂಗ್ ಬಳಿ 5 ಕೆ.ಜಿ, ತ್ರಿಲೋಚನ್ ರಾಣಾ ಮತ್ತು ನೀಲಂ ಬಾರ್ಲಾ ಹತ್ತಿರ ಕ್ರಮವಾಗಿ 7 ಕೆ.ಜಿ ಮತ್ತು 3 ಕೆ.ಜಿ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಮನಮುಂಡ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಮೂವರು ಐಆರ್‌ಬಿ ಯೋಧರನ್ನು ಕೆಲವು ದಿನಗಳ ಹಿಂದೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಈಗ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ಬೌಧ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗೋಯೆಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.