ADVERTISEMENT

ದಟ್ಟ ಮಂಜು: ಆರೆಂಜ್ ಅಲರ್ಟ್ ಘೋಷಣೆ

ಪಿಟಿಐ
Published 12 ಡಿಸೆಂಬರ್ 2019, 10:06 IST
Last Updated 12 ಡಿಸೆಂಬರ್ 2019, 10:06 IST

ಜಮ್ಮು: ಕಣಿವೆ ರಾಜ್ಯದ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಲಘು ಹಿಮಪಾತ ಉಂಟಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದ್ದು, ಗುರುವಾರ ಹಾಗೂ ಶುಕ್ರವಾರ ಇದೇ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

ಭಾರಿ ಹಿಮಪಾತದ ಜತೆಗೆ ಮಳೆಯೂ ಬೀಳುತ್ತಿದ್ದುದರಿಂದ ಈ ಪ್ರದೇಶದಲ್ಲಿ ಜನಜೀವನಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ADVERTISEMENT

ಕಾಶ್ಮೀರದ ಉತ್ತರಭಾಗ, ಪುಲ್ಗಾಮ್‌ ಹಾಗೂ ಕೇಂದ್ರ ಕಾಶ್ಮೀರದ ಸೋನಾಮಾರ್ಗ್‌ ಪ್ರದೇಶದಲ್ಲಿಯೂ ಲಘು ಹಿಮಪಾತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟವಾದ ಮಂಜಿನಿಂದಾಗಿ ನಾಲ್ಕು ದಿನಗಳಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರಹೋಗುವ ಎಲ್ಲ ವಿಮಾನಗಳನ್ನು ರದ್ದುಪಡಿಸಲಾಗಿದೆ. ಗೋಚರಿಸುವ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಚಂಡೀಗಡದಲ್ಲೂ ದಟ್ಟ ಮಂಜು: ರಾಜ್ಯ ಮತ್ತು ನೆರೆಯ ಹರಿಯಾಣದಲ್ಲಿ ದಟ್ಟ ಮಂಜಿನ ವಾತಾವರಣ ಮುಂದುವರಿದಿದ್ದು, ಪಂಜಾಬ್‌ನ ಅದಂಪೂರ್ ಮತ್ತು ಲುಧಿಯಾನದಲ್ಲಿ ಬುಧವಾರ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.

ಅದಂಪೂರ್‌ ಹಾಗೂ ಲುಧಿಯಾನದಲ್ಲಿ ಕ್ರಮವಾಗಿ 3.4 ಹಾಗೂ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅಮೃತ್‌ಸರದಲ್ಲಿ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.