ADVERTISEMENT

ಒಮರ್ ಬಿಡುಗಡೆಗೆ ಸ್ಟಾಲಿನ್ ಆಗ್ರಹ

ಪಿಟಿಐ
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST
   

ಚೆನ್ನೈ: ಗೃಹಬಂಧನದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ಮೂರು ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಾಕಿರುವ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು, ‘ಈ ಚಿತ್ರಗಳನ್ನು ನೋಡಲು ತೀವ್ರ ದುಃಖವಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಮೊದಲ ಚಿತ್ರದಲ್ಲಿ ಗಡ್ಡ ಇಲ್ಲದಿ ರುವ, ಎರಡನೆ ಚಿತ್ರದಲ್ಲಿ ಕೊಂಚ ಗಡ್ಡ ಇರುವ ಹಾಗೂ ಮೂರನೆಯ ಚಿತ್ರದಲ್ಲಿ ಉದ್ದನೆಯ ಗಡ್ಡ ಇರುವ ಒಮರ್ ಅವರು ಕಾಣುತ್ತಾರೆ.

‘ಫಾರೂಕ್ ಅಬ್ದುಲ್ಲಾ, ಮೆಹ ಬೂಬಾ ಮುಫ್ತಿ ಹಾಗೂ ಇತರೆ ನಾಯ ಕರ ಕುರಿತು ಸಹ ಕಳವಳ ಆಗುತ್ತಿದೆ. ತಕ್ಷಣವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹಬಂಧನದಲ್ಲಿರುವ ಎಲ್ಲಾ ನಾಯಕರನ್ನು ಸರ್ಕಾರ ಬಿಡುಗಡೆಗೊಳಿ ಸಬೇಕು’ ಎಂದು ಸ್ಟಾಲಿನ್ ಹೇಳಿದ್ದಾರೆ.

ADVERTISEMENT

ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ಗೃಹಬಂಧನದಲ್ಲಿರುವ ನಾಯಕರಲ್ಲಿ ಒಮರ್ ಸಹ ಸೇರಿದ್ದಾರೆ.

ಐದು ತಿಂಗಳ ಬಳಿಕ ಜ.25ರಂದು ಮೊದಲ ಬಾರಿಗೆ ಒಮರ್ ಅವರ ಚಿತ್ರ ಟ್ವಿಟರ್‌ನಲ್ಲಿ ಕಂಡುಬಂದಿತ್ತು. ಗುರುತಿ ಸಲು ಕಷ್ಟವಾಗುವಂತಹ ರೂಪದಲ್ಲಿ ಕಾಣಿಸಿದ ಒಮರ್ ಅವರ ಈ ಚಿತ್ರದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಿತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.