ADVERTISEMENT

ಓಮೈಕ್ರಾನ್ ಭೀತಿ: ಮಹಾರಾಷ್ಟ್ರದಿಂದ 28 ಮಾದರಿ ವಂಶವಾಹಿ ಅಧ್ಯಯನಕ್ಕೆ

ಡೆಕ್ಕನ್ ಹೆರಾಲ್ಡ್
Published 3 ಡಿಸೆಂಬರ್ 2021, 14:23 IST
Last Updated 3 ಡಿಸೆಂಬರ್ 2021, 14:23 IST
ಸಾಂದರ್ಭಿಕ ಚಿತ್ರ – (ಕೃಪೆ: ಎಎಫ್‌ಪಿ)
ಸಾಂದರ್ಭಿಕ ಚಿತ್ರ – (ಕೃಪೆ: ಎಎಫ್‌ಪಿ)   

ಮುಂಬೈ: ದೇಶದಲ್ಲಿ ಕೊರೊನಾ ವೈರಸ್‌ನ ಓಮೈಕ್ರಾನ್ ರೂಪಾಂತರ ತಳಿಯ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಮಹಾರಾಷ್ಟ್ರದಿಂದ 28 ಮಾದರಿಗಳನ್ನು ವಂಶವಾಹಿ ಅಧ್ಯಯನಕ್ಕೆ ಕಳುಹಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಈವರೆಗೆ ಓಮೈಕ್ರಾನ್‌ನಿಂದಾಗಿ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿಲ್ಲ.

‘28 ಮಾದರಿಗಳನ್ನು ವಂಶವಾಹಿ ಅಧ್ಯಯನಕ್ಕೆ ಕಳುಹಿಸಲಾಗಿದೆ. ಈ ಪೈಕಿ 12 ಮಾದರಿಗಳನ್ನು ಮುಂಬೈಯ ಕಸ್ತೂರ್ಬಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. 16 ಮಾದರಿಗಳನ್ನು ಪುಣೆಯ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಗೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.

10 ಮಾದರಿಗಳನ್ನು ಮುಂಬೈ ಮೆಟ್ರೊಪಾಲಿಟನ್ ಪ್ರದೇಶದಿಂದ ಸಂಗ್ರಹಿಸಲಾಗಿತ್ತು. 25 ಮಾದರಿಗಳು ಓಮೈಕ್ರಾನ್‌ ಸೋಂಕಿತರು ಹೆಚ್ಚಿರುವ ದೇಶಗಳಿಂದ ಬಂದವರದ್ದಾಗಿದೆ.

‘ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಮುನ್ನೆಚ್ಚರಿಕೆ ವಹಿಸಬೇಕಿದೆ. ಲಸಿಕೆ ನೀಡಿಕೆ ಹೆಚ್ಚಿಸಬೇಕಿದೆ. ಎಲ್ಲರೂ ಮಾಸ್ಕ್ ಧರಿಸಬೇಕು’ ಎಂದು ಟೋಪೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.