ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್
ಮುಂಬೈ: ಅಜಿತ್ ಪವಾರ್ ಅವರನ್ನು ‘ಶಾಶ್ವತ ಉಪ ಮುಖ್ಯಮಂತ್ರಿ’ ಎಂದು ಕರೆದಿರುವ ಪ್ರತಿಪಕ್ಷ ಮಹಾ ವಿಕಾಸ್ ಆಘಾಡಿಗೆ(ಎಂವಿಎ) ತಿರುಗೇಟು ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಮುಂದೊಂದು ದಿನ ಅಜಿತ್ ಪವಾರ್ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಹೇಳಿದ್ದಾರೆ.
65 ವರ್ಷದ ಅಜಿತ್ ಪವಾರ್ ಅವರು ಇಲ್ಲಿಯವರೆಗೆ ಆರು ಬಾರಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ.
‘ನಿಮ್ಮನ್ನು(ಅಜಿತ್ ಪವಾರ್) ಅವರು(ಎಂವಿಎ) ಶಾಶ್ವತ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದಾರೆ. ಆದರೆ, ನನ್ನ ಹಾರೈಕೆ ನಿಮ್ಮೊಂದಿಗೆ ಇದೆ. ಮುಂದೊಂದು ದಿನ ನೀವೂ ಮಹಾರಾಷ್ಟ್ರದ ಸಿಎಂ ಆಗಲಿದ್ದೀರಿ’ ಎಂದು ಫಡಣವೀಸ್ ಅಜಿತ್ ಪವಾರ್ ಪರ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ.
‘ಅಜಿತ್ ದಾದಾ ಮುಂಜಾನೆ ಬೇಗನೆ ಎದ್ದು ಕೆಲಸ ಪ್ರಾರಂಭಿಸುತ್ತಾರೆ. ನಾನು ಮಧ್ಯಾಹ್ನ 12 ಗಂಟೆಯಿಂದ ಮಧ್ಯರಾತ್ರಿಯವರೆಗೂ ಕೆಲಸ ಮಾಡುತ್ತೇನೆ. ಏಕನಾಥ ಶಿಂದೆ ಅವರು ಇಡೀ ರಾತ್ರಿ ಕೂತು ಕೆಲಸ ಮಾಡುತ್ತಾರೆ’ ಎಂದು ಮೂವರ ಕಾರ್ಯವೈಖರಿಯನ್ನು ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.