ADVERTISEMENT

ಗುರುದಾಸ್‌ಪುರ: ಒಂದು ಕೆಜಿ ಆರ್‌ಡಿಎಕ್ಸ್‌ ಪತ್ತೆ

ಪಿಟಿಐ
Published 1 ಡಿಸೆಂಬರ್ 2021, 12:15 IST
Last Updated 1 ಡಿಸೆಂಬರ್ 2021, 12:15 IST
.
.   

ಚಂಡೀಗಢ (ಪಿಟಿಐ): ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಅಮೃತಸರದ ನಿವಾಸಿಯಿಂದ ಒಂದು ಕೆ.ಜಿ ಆರ್‌ಡಿಎಕ್ಸ್‌ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆರೋಪಿಯನ್ನು ಸುಖ್‌ವಿಂದರ್‌ (29) ಎಂದು ಗುರುತಿಸಲಾಗಿದೆ. ಆತನಿಂದ ಪಿಸ್ತೂಲ್‌ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಗುರುದಾಸ್‌ಪುರ ಜಿಲ್ಲೆಯ ದೀನನಗರದಲ್ಲಿ ಭಾನುವಾರ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆತ ಆರ್‌ಡಿಎಕ್ಸ್‌ ಸ್ಫೋಟಕದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT