
ಪಿಟಿಐ
ಪಿಟಿಐ
ಲಖನೌ: ಬಿಜೆಪಿ ನೇತೃತ್ವದ ಸರ್ಕಾರ ‘ಒಂದು ರಾಷ್ಟ್ರ, ಒಬ್ಬ ಉದ್ಯಮಿ’ ಎಂಬ ಕಾರ್ಯಸೂಚಿ ಜಾರಿಗೆ ತರಲು ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾನುವಾರ ಆರೋಪಿಸಿದ್ದಾರೆ.
‘ಒಂದು ರಾಷ್ಟ್ರ, ಒಬ್ಬ ಉದ್ಯಮಿಯತ್ತ ಸಾಗುವುದು ಬಿಜೆಪಿಯ ರಹಸ್ಯ ಕಾರ್ಯಸೂಚಿಯಾಗಿದೆ. ದೇಶದ ಆರ್ಥಿಕತೆ ಮತ್ತು ರಾಜಕೀಯದಲ್ಲಿ ಏಕಸ್ವಾಮ್ಯವನ್ನು ಇದು ವ್ಯವಸ್ಥಿತವಾಗಿ ಉತ್ತೇಜಿಸುತ್ತಿದೆ’ ಎಂದು ಹೇಳಿದ್ದಾರೆ.
‘ಒಂದು ಉದ್ಯಮ, ಒಂದು ದೇಣಿಗೆ ಎಂಬ ತತ್ವದಡಿ’ ರಾಜಕೀಯವಾಗಿ ಆರ್ಥಿಕ ನೆರವು ಪಡೆಯುವ ಉದ್ದೇಶದಿಂದ ಬಿಜೆಪಿ ಕೆಲವು ಕೈಗಾರಿಕೋದ್ಯಮಿಗಳ ಕೈಯಲ್ಲಿ ವ್ಯವಹಾರವನ್ನು ಕೇಂದ್ರೀಕರಿಸಲು ಬಯಸಿದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.