ADVERTISEMENT

ಶೀಘ್ರವೇ ₹ 1 ಮುಖಬೆಲೆಯ ಹೊಸ ನೋಟು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:45 IST
Last Updated 10 ಫೆಬ್ರುವರಿ 2020, 19:45 IST
₹ 1 ಮುಖಬೆಲೆಯ ನೋಟು
₹ 1 ಮುಖಬೆಲೆಯ ನೋಟು   

ನವದೆಹಲಿ: ₹ 1 ಮುಖಬೆಲೆಯ ಹೊಸ ನೋಟುಗಳು ಶೀಘ್ರದಲ್ಲಿಯೇ ಚಲಾವಣೆಗೆ ಬರಲಿವೆ.ಹಣಕಾಸು ಸಚಿವಾಲಯವು ಈ ನೋಟುಗಳನ್ನು ಮುದ್ರಿಸಲಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಈ ನೋಟು ಹಣಕಾಸು ಕಾರ್ಯದರ್ಶಿ ಅತನು ಚಕ್ರವರ್ತಿ ಅವರ ಸಹಿಯನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಹೊಂದಿರಲಿದೆ.

ಕೃಷಿ ಪ್ರಧಾನ ಅರ್ಥ ವ್ಯವಸ್ಥೆ ಪ್ರತಿನಿಧಿಸಲು ₹ ಚಿಹ್ನೆಯನ್ನು ಧಾನ್ಯಗಳ ರೂಪದಲ್ಲಿ ವಿನ್ಯಾಸ ಮಾಡಲಾಗಿದೆ. ನೋಟು ಗುಲಾಬಿ ಹಸಿರು ಬಣ್ಣದಲ್ಲಿ ಇರಲಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುದ್ರಿಸುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.