ADVERTISEMENT

ವಾರಣಾಸಿ: ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಅಡವು ಇಟ್ಟರೆ ಸಿಗುತ್ತದೆ ಈರುಳ್ಳಿ ಸಾಲ! 

ಏಜೆನ್ಸೀಸ್
Published 2 ಡಿಸೆಂಬರ್ 2019, 6:15 IST
Last Updated 2 ಡಿಸೆಂಬರ್ 2019, 6:15 IST
ಈರುಳ್ಳಿ
ಈರುಳ್ಳಿ   

ವಾರಣಾಸಿ:'ಅಂಗಡಿಯಲ್ಲಿ ಆಧಾರ್ ಕಾರ್ಡ್ ಅಡವಿಟ್ಟರೆ ಈರುಳ್ಳಿ ಸಾಲ ಪಡೆಯಬಹುದು'- ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಸಮಾಜವಾದಿ ಪಕ್ಷದ ಯುವ ಸಂಘಟನೆ ನಡೆಸಿರುವವಿನೂತನ ಪ್ರತಿಭಟನೆ ಇದು.

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು, ಈರುಳ್ಳಿ ಬೆಲೆ ಏರಿಕೆಯನ್ನು ಖಂಡಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಅಂಗಡಿಯಲ್ಲಿ ಆಧಾರ್ ಕಾರ್ಡ್ ಅಥವಾ ಬೆಳ್ಳಿ ಆಭರಣ ಅಡವಿಟ್ಟು ಈರುಳ್ಳಿ ಸಾಲ ಪಡೆಯಬಹುದು. ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಲಾಕರ್‌ನಲ್ಲಿಡಲಾಗಿದೆ ಎಂದಿದ್ದಾರೆ.

ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಲಖನೌದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ವಿಧಾನಸೌಧದ ಹೊರಗೆ 1 ಕೆಜಿ ಈರುಳ್ಳಿಗೆ ₹40ರಂತೆ ಮಾರಾಟ ಮಾಡಿ ಪ್ರತಿಭಟಿಸಿದ್ದರು.

ಪ್ರತಿಭಟನೆ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ನೇತಾರ ಶೈಲೇಂದ್ರ ತಿವಾರಿ, ಈರುಳ್ಳಿ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಹೊರೆಯಾಗಿದೆ. ಈ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.