ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಗೇಮಿಂಗ್ ಕೇವಲ ಹವ್ಯಾಸವಲ್ಲ, ಅದೊಂದು ಕೌಶಲ್ಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಆನ್‌ಲೈನ್ ಬೆಟ್ಟಿಂಗ್ ಸಂಬಂಧಿಸಿದ ಗೇಮ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.
ತಮ್ಮ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಮೋದಿ, ಗಮನ, ಸಮತೋಲನ ಮತ್ತು ನೈತಿಕ ಮೌಲ್ಯಗಳನ್ನು ಅನುಸರಿಸಿದರೆ ಆಟವು ಅರ್ಥಪೂರ್ಣ ಕೌಶಲ್ಯ ಮತ್ತು ವೃತ್ತಿ ಮಾರ್ಗವಾಗಬಹುದು ಎಂದು ಹೇಳಿದರು.
ಇದೇವೇಳೆ, ಬೆಟ್ಟಿಂಗ್ ಸಂಬಂಧಿತ ಆನ್‌ಲೈನ್ ಗೇಮ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.
‘ಗೇಮಿಂಗ್ ಕೇವಲ ಹವ್ಯಾಸವಲ್ಲ, ಅದೊಂದು ಕೌಶಲ್ಯ. ವೇಗವನ್ನೂ ಒಳಗೊಂಡಿರುತ್ತದೆ. ಹಾಗಾಗಿ, ಅದು ಅಭಿವೃದ್ಧಿಗೂ ಒಳ್ಳೆಯದು. ಉತ್ತಮ ಗುಣಮಟ್ಟದ ಗೇಮಿಂಗ್ ಅನ್ನು ಗುರುತಿಸುವ ಮೂಲಕ ನಿಮ್ಮ ಪರಿಣತಿಯನ್ನು ಕಂಡುಕೊಳ್ಳಿ’ ಎಂದಿದ್ದಾರೆ.
ಗೇಮಿಂಗ್ ಸ್ವಯಂ ಅಭಿವೃದ್ಧಿಗೆ ಪೂರಕ. ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಗೇಮಿಂಗ್ ಮತ್ತು ಸಮತೋಲನ ಅಧ್ಯಯನಗಳಲ್ಲಿ ಪರಿಣತಿ ಹೊಂದುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಗೇಮಿಂಗ್‌ನಲ್ಲಿ ಜೂಜಾಟದ ವಿರುದ್ಧ ಎಚ್ಚರಿಕೆ ನೀಡಿದ ಅವರು, ಅಂತಹ ಅಭ್ಯಾಸಗಳನ್ನು ತಡೆಗಟ್ಟಲು ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಭಾರತದಲ್ಲಿ ಇಂಟರ್ನೆಟ್ ಅಗ್ಗವಾಗಿದೆ ಎಂಬ ಕಾರಣಕ್ಕಾಗಿ ಸಮಯ ವ್ಯರ್ಥ ಮಾಡಬೇಡಿ. ನಾನು ಬೆಟ್ಟಿಂಗ್ ವಿರುದ್ಧ ಕಾನೂನನ್ನು ಮಾಡಿದ್ದೇನೆ. ಹಾಳಾಗಲು ಬಿಡುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.