ADVERTISEMENT

ಕೇಂದ್ರ ಸರ್ಕಾರಿ ನೌಕರಿ: ಮುಂದಿನ ವರ್ಷದಿಂದ ಸಿಇಟಿ

ಪಿಟಿಐ
Published 28 ಡಿಸೆಂಬರ್ 2020, 16:11 IST
Last Updated 28 ಡಿಸೆಂಬರ್ 2020, 16:11 IST
ಜಿತೇಂದ್ರ ಸಿಂಗ್‌
ಜಿತೇಂದ್ರ ಸಿಂಗ್‌   

ನವದೆಹಲಿ: ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗಾಗಿ ಮುಂದಿನ ವರ್ಷದಿಂದ ದೇಶದಾದ್ಯಂತ ಆನ್‌ಲೈನ್‌ ಮುಖಾಂತರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಸೋಮವಾರ ಹೇಳಿದರು.

ಸರ್ಕಾರಿ ನೌಕರಿಗೆ ಸೇರಲು ಬಯಸುವ ಯುವ ಜನರಿಗೆ ಈ ಪರೀಕ್ಷೆ ವರವಾಗಲಿದೆ ಎಂದು ಅವರು ಹೇಳಿದರು.

‘ಸಿಇಟಿ ನಡೆಸಲು ಕೇಂದ್ರ ಸಚಿವ ಸಂಪುಟದ ಅನುಮತಿ ಪಡೆದು ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು(ಎನ್‌ಆರ್‌ಎ) ರಚಿಸಲಾಗಿದೆ. ಗ್ರೂಪ್‌–ಬಿ ಮತ್ತು ಗ್ರೂಪ್‌–ಸಿ (ತಾಂತ್ರಿಕೇತರ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎನ್‌ಆರ್‌ಎ ಈ ಪರೀಕ್ಷೆ ನಡೆಸಲಿದೆ. ಸಿಇಟಿಯು, ಉದ್ಯೋಗಕ್ಕಾಗಿ ಪ್ರಾಥಮಿಕ ಹಂತದ ಆಯ್ಕೆ ಪ್ರಕ್ರಿಯೆ ಆಗಿರಲಿದೆ’ ಎಂದರು.

ADVERTISEMENT

‘ಈ ಸುಧಾರಣೆಯಿಂದಾಗಿ, ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಹಳ್ಳಿಗಳಿಂದ ಬರುವ ಅಭ್ಯರ್ಥಿಗಳಿಗೂ ಅನುಕೂಲವಾಗಲಿದೆ. ದೂರದ ಊರುಗಳಲ್ಲಿ ಇರುವ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಾಗದೇ ಇದ್ದ ಮಹಿಳೆಯರು, ಅಂಗವಿಕಲರು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಭ್ಯರ್ಥಿಗಳಿಗೂ ಇದು ಸಹಕಾರಿಯಾಗಲಿದೆ’ ಎಂದು ವಿವರಿಸಿದರು.

2021 ಜೂನ್‌ ನಂತರದಲ್ಲಿ ಎನ್‌ಆರ್‌ಎ ಮೊದಲ ಸಿಇಟಿ ನಡೆಸುವ ಸಾಧ್ಯತೆ ಇದೆ. ಹೀಗಿದ್ದರೂ, ಪ್ರಸ್ತುತ ಇರುವ ಏಜೆನ್ಸಿಗಳಾದ ಎಸ್‌ಎಸ್‌ಸಿ, ಆರ್‌ಆರ್‌ಬಿ ಹಾಗೂ ಐಬಿಪಿಎಸ್‌ಗಳು ಅಗತ್ಯತೆಗೆ ತಕ್ಕಂತೆ ನೇಮಕಾತಿಯನ್ನು ನಡೆಸಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.