ನವದೆಹಲಿ: ಬಡವರಿಗೆ ನಗದು ಮತ್ತು ಆಹಾರ ಧಾನ್ಯಗಳನ್ನು ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ, ಹೃದಯಹೀನ ಸರ್ಕಾರ ಮಾತ್ರ ಈ ರೀತಿ ಸುಮ್ಮನಿರಲು ಸಾಧ್ಯ ಎಂದು ಟೀಕಿಸಿದ್ದಾರೆ.
ಸರ್ಕಾರವನ್ನು ಟೀಕಿಸಿ ಸರಣಿ ಟ್ವೀಟ್ ಮಾಡಿದ ಅವರುಹೆಚ್ಚಿನ ಜನರ ಕೈಯಲ್ಲಿ ಹಣ ಖಾಲಿಯಾಗಿದೆ. ಜನರು ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲುವುದು ಜಾಸ್ತಿಯಾಗಿದೆ ಎಂದಿದ್ದಾರೆ.
ಎಲ್ಲ ಬಡ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡುವ ಮೂಲಕ ಜನರ ಹಸಿವು ನೀಗಿಸಿ ಅವರ ಘನತೆ ಕಾಪಾಡಬೇಕು. 77 ದಶಲಕ್ಷ ಟನ್ ಆಹಾರ ಧಾನ್ಯದ ಸಣ್ಣದೊಂದು ಭಾಗವನ್ನು ಎಫ್‌ಸಿಐ ಮೂಲಕ ಜನರಿಗೆ ಉಚಿತವಾಗಿ ನೀಡಿದರೆ ಅವರಿಗೆ ಉಪಕಾರವಾದೀತು ಎಂದು ಚಿದಂಬರಂ ಹೇಳಿದ್ದಾರೆ.
ಇವೆರಡು ಪ್ರಶ್ನೆಗಳು ಆರ್ಥಿಕ ಮತ್ತು ನೈತಿಕ ಪ್ರಶ್ನೆಯಾಗಿದೆ. ದೇಶದ ಜನರು ಅಸಹಾಯಕರಾಗಿ ನೋಡುತ್ತಾ ನಿಂತಿರುವಾಗ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾನ್ ಅವರು ಈ ಎರಡೂ ಪ್ರಶ್ನೆಗಳಿಗೆ ಉತ್ತರಿಸಲು ಸೋತಿದ್ದಾರೆ.ದೇಶವ್ಯಾಪಿ ಲಾಕ್‍ಡೌನ್ ಆಗಿರುವ ಹೊತ್ತಲ್ಲಿ ಬಡವರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಅವರಿಗೆ ನಗದು ವರ್ಗಾವಣೆ ಮಾಡಬೇಕು ಎಂದು ಚಿದಂಬರಂ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.