ADVERTISEMENT

Cyclone Ditwah|‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆ: ಕೊಲಂಬೊ ತಲುಪಿದ ಸಿ–130ಜೆ

ಪಿಟಿಐ
Published 1 ಡಿಸೆಂಬರ್ 2025, 0:01 IST
Last Updated 1 ಡಿಸೆಂಬರ್ 2025, 0:01 IST
   

ನವದೆಹಲಿ: ಪ್ರವಾಹದಲ್ಲಿ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆಯ ಭಾಗವಾಗಿ, ನೆರವಿನ ಸಾಮಗ್ರಿ ಹೊತ್ತ ಸಿ–130ಜೆ ವಿಮಾನವನ್ನು ಭಾರತೀಯ ವಾಯುಪಡೆಯು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

ತ್ವರಿತ ಪರಿಹಾರ ಕಾರ್ಯಾಚರಣೆಗಾಗಿ ಶ್ರೀಲಂಕಾ ರಾಜಧಾನಿಯಲ್ಲಿ ಎಂಐ 17 ಹೆಲಿಕಾಪ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದರು.

‘ಕೊಲಂಬೊದಲ್ಲಿ ನಿಯೋಜಿತವಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್‌) ತಂಡಕ್ಕೆ ಅಗತ್ಯವಿರುವ ಸಾಧನಗಳನ್ನು ಹೊತ್ತೊಯ್ದ ವಿಮಾನವು ಭಾನುವಾರ ಅಲ್ಲಿಗೆ ತಲುಪಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಅತಂತ್ರರಾಗಿರುವ ಭಾರತೀಯರನ್ನು ಈ ವಿಮಾನದ ಮೂಲಕ ವಾಪಸ್‌ ಕರೆತರಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.