ADVERTISEMENT

ಮೂರು ಸೇನಾಪಡೆಗಳ ಸಮನ್ವಯದಿಂದಾಗಿ ಆಪರೇಷನ್‌ ಸಿಂಧೂರ ಯಶಸ್ವಿ: ಪ್ರಧಾನಿ ಮೋದಿ

ಪಿಟಿಐ
Published 20 ಅಕ್ಟೋಬರ್ 2025, 7:07 IST
Last Updated 20 ಅಕ್ಟೋಬರ್ 2025, 7:07 IST
   

ಪಣಜಿ: ಮೂರು ಸೇನಾಪಡೆಗಳ ಅಸಾಧಾರಣ ಸಮನ್ವಯದಿಂದಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನೌಕಾಪಡೆಯ ಯೋಧರೊಂದಿಗೆ ಮೋದಿ ಅವರು ದೀಪಾವಳಿ ಆಚರಿಸಿದರು. ನಂತರ ಅವರನ್ನು ಉದ್ದೇಶಿಸಿ ಮಾತನಾಡಿದರು.

‘ನಮ್ಮ ಸರ್ಕಾರವು ಭಾರತವನ್ನು ಜಗತ್ತಿನ ಅತಿದೊಡ್ಡ ಆಯುಧ ರಫ್ತು ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. 2014 ರಿಂದ 40ಕ್ಕೂ ಅಧಿಕ ಯುದ್ಧ ನೌಕೆ ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಸೇನಾಪಡೆಯ ಶೌರ್ಯ ಮತ್ತು ಸಹಕಾರದಿಂದ ದೇಶದಲ್ಲಿ ನಕ್ಸಲರನ್ನು ನಿರ್ನಾಮ ಮಾಡಲು ಸಾಧ್ಯವಾಗಿದೆ. ಅವರಿಂದ ಮರಳಿ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ನಕ್ಸಲರ ವಿರುದ್ಧ ಶೇ 90ರಷ್ಟು ಯಶಸ್ಸು ಸಾಧಿಸಲಾಗಿದೆ. ನಕ್ಸಲರ ಹಿಂಸಾಚಾರವನ್ನು ಸಂಪೂರ್ಣ ಕೊನೆಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.

ದೇಶದಲ್ಲಿ 125 ಜಿಲ್ಲೆಗಳನ್ನು ನಕ್ಸಲ್‌ ಪೀಡಿತ ಜಿಲ್ಲೆಗಳು ಎಂದು ಘೋಷಿಸಲಾಗಿತ್ತು. ಇದೀಗ ಕೇವಲ 11 ಜಿಲ್ಲೆಗಳು ಮಾತ್ರ ಆ ಹಣೆಪಟ್ಟಿಯನ್ನು ಹೊತ್ತುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.