ಜೈಪುರ: 'ಆಪರೇಷನ್ ಸಿಂಧೂರ ಮೂಲಕ ಭಾರತದ ಶಕ್ತಿ, ಸೇನೆಯ ತಾಕತ್ತು ಹಾಗೂ ಮೋದಿಯವರ 'ನಿರ್ಣಾಯಕ ನಾಯಕತ್ವ'ವು ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಜೈಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಸುರಕ್ಷಿತವಾಗಿದೆ. ಆಪರೇಷನ್ ಸಿಂಧೂರ ಮೂಲಕ ಕೇವಲ 22 ನಿಮಿಷಗಳಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ನಾಶ ಮಾಡಿದ್ದು ಭಾರತೀಯ ಸೇನೆಯ ಶೌರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಪಾಕಿಸ್ತಾನಕ್ಕಾದ ಹಿನ್ನಡೆಯು ನಮ್ಮ ಸೇನೆಯ ಶಕ್ತಿಯನ್ನು ಹಾಗೂ ಮೋದಿಯವರ ನಾಯಕತ್ವದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.
ಸರ್ಜಿಕಲ್ ದಾಳಿ, ವಾಯು ದಾಳಿ ಹಾಗೂ ಆಪರೇಷನ್ ಸಿಂಧೂರ ಮೂಲಕ ನಮ್ಮ ತಂಟೆಗೆ ಬಂದರೆ, ಅವರ ಗಡಿಯೊಳಗೆ ನುಗ್ಗಿ ಉತ್ತರ ಕೊಡುತ್ತೇವೆ ಎನ್ನುವುದನ್ನು ಭಾರತ ನಿರೂಪಿಸಿದೆ ಎಂದರು.
ಪಾಕಿಸ್ತಾನದ ಕುತಂತ್ರಗಳು ನಿಲ್ಲುವವರೆಗೂ ಆಪರೇಷನ್ ಸಿಂಧೂರ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೊಸ ನಿಲುವುಗಳನ್ನು ಪ್ರದರ್ಶಿಸುವ ಮೂಲಕ 'ದಿಟ್ಟ ಹಾಗೂ ಸ್ಪಷ್ಟ ರಾಷ್ಟ್ರೀಯ ಭದ್ರತಾ ನೀತಿಯ ಹೊಸ ಯುಗ' ಇದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.