ADVERTISEMENT

ಅಸ್ಸಾಂ: ಹದಿಹರೆಯದ ಪುತ್ರನ 'ಬಲವಂತ ವಿವಾಹ' ತಡೆಯಲೆತ್ನಿಸಿದ ಅಮ್ಮನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 10:39 IST
Last Updated 7 ಅಕ್ಟೋಬರ್ 2018, 10:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಹದಿಹರೆಯದ ತಮ್ಮ ಮಗನನ್ನು ಎಳೆ ವಯಸ್ಸಿನ ಬಾಲಕಿಯೊಂದಿಗೆಬಲವಂತ ವಿವಾಹತಡೆಯಲೆತ್ನಿಸಿದ ಅಸ್ಸಾಂನ ಧುಬ್ರಿ ಜಿಲ್ಲೆಯ ಮಹಿಳೆಯೊಬ್ಬರ ಮೇಲೆ ಗಂಭೀರ ಹಲ್ಲೆ ನಡೆದ ಪ್ರಕರಣ ವರದಿಯಾಗಿದೆ.

ಇಲ್ಲಿನ ಬೊಟೆರ್‌ಹಟ್ ಗ್ರಾಮದಲ್ಲಿನ 39ರ ಹರೆಯದ ರಷಿಮಾ ಬೀಬಿ ಎಂಬವರ ಮೇಲೆ ಅಕ್ಟೋಬರ್ 2ರಂದು ಹಲ್ಲೆ ನಡೆದಿತ್ತು.ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ನಾಲ್ಕು ದಿನಗಳ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೀಬಿ ಅವರದ್ದು ಎರಡನೇ ಪತಿಗೆಜನಿಸಿದ ಮಗನಿಗೆ ಈಗ 19 ವರ್ಷ. ಎಳೆ ವಯಸ್ಸಿನ ಬಾಲಕಿಯೊಂದಿಗೆ ಕೆಲವು ತಿಂಗಳುಗಳ ಹಿಂದೆ ಈತನ ವಿವಾಹ ನಡೆದಿತ್ತು. ಬೀಬಿ ಅವರ ಎರಡನೇ ಪತಿ ಮಂಟು ಶೇಖ್ ಬಲವಂತವಾಗಿ ಈ ಮದುವೆ ಮಾಡಿಸಿದ್ದರು.ಭಾರತದಲ್ಲಿ ಮದುವೆ ಗಂಡಿನ ವಯಸ್ಸು 21 ಆಗಿದೆ, ಈ ವಿವಾಹಕ್ಕೆ ಬೀಬಿ ವಿರೋಧ ಸೂಚಿಸಿದ್ದರು.

ADVERTISEMENT

ಆಗಸ್ಟ್ ನಲ್ಲಿ ನಡೆದ ಈ ವಿವಾಹದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದ ಶೇಖ್ ಮತ್ತು ಹುಡುಗಿಯ ಕುಟುಂಬಬೀಬಿ ವಿರುದ್ಧ ಕೋಪಗೊಂಡಿತ್ತು ಎಂದು ಧುಬ್ರಿ ಪೊಲೀಸ್ ಅಧಿಕಾರಿ ಲಾಂಗ್ನಿಚ್ ಟೆರಾಂಗ್ ಹೇಳಿದ್ದಾರೆ.

ಹಲವಾರು ಮಂದಿ ಬೀಬಿ ಅವರಿಗೆ ಹೊಡೆದು ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದಾರೆ.ಕೆಲವರು ಆಕೆಯ ಮೇಲೆ ಬಿಸಿನೀರು ಎರಚಿದ್ದಾರೆ.ಈ ಎಲ್ಲ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.ಬೀಬಿ ಅವರು ಮೂರನೇ ಪತಿ ಮೊಯಿನುಲ್ ಹಖ್ ಎಂಬವರ ದೂರಿನ ಮೇರೆಗೆಬೀಬಿ ಅವರ ಮೇಲೆ ಹಲ್ಲೆ ನಡೆಸಿದ ಮೂವರು ಮಹಿಳೆಯರು ಮತ್ತು ಅಲ್ಲಿ ಮೂಕ ಪ್ರೇಕ್ಷಕರಾಗಿ ನೆರೆದಿದ್ದ ಕೆಲವರ ವಿರುದ್ಧ ದೂರು ದಾಖಲಾಗಿದೆ.

ರಷಿಮಾ ಬೀಬಿಯ ಮಗ ಮತ್ತು ಸೊಸೆ ಈಗ ಬೇರೆಯಾಗಿದ್ದು, ಅವರ ಹೆತ್ತವರ ಮನೆಯಲ್ಲಿದ್ದಾರೆ. ಗಂಭೀರ ಗಾಯಗೊಂಡ ರಷಿಮಾ ಕೂಚ್ ಬೆಹರ್‍‍ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.