ADVERTISEMENT

ಅಣೆಕಟ್ಟು ಸುರಕ್ಷತಾ ಮಸೂದೆಗೆ ವಿರೋಧ ಪಕ್ಷಗಳ ಆಕ್ಷೇಪ

ಪಿಟಿಐ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
   

ನವದೆಹಲಿ: ಅಣೆಕಟ್ಟೆಗಳ ಸುರಕ್ಷತೆಯ ಕುರಿತು ಕೇಂದ್ರ ಸರ್ಕಾರವು ಮಂಡಿಸಿದ ಮಸೂದೆಗೆ ವಿರೋಧಪಕ್ಷಗಳು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ‘ಕೇಂದ್ರ ಸರ್ಕಾರವು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ’ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದರು.

ಅಣೆಕಟ್ಟೆ ಸುರಕ್ಷತಾ ಮಸೂದೆ–2019 ಅನ್ನು ಲೋಕಸಭೆಯಲ್ಲಿ ಮಂಡಿಸಿದ ಜಲಶಕ್ತಿ ಖಾತೆಯ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌, ‘ಅಣೆಕಟ್ಟೆಗಳ ಮೇಲೆ ರಾಜ್ಯ ಸರ್ಕಾರಗಳು ಹೊಂದಿರುವ ನಿಯಂತ್ರಣವನ್ನು ಮೊಟಕುಗೊಳಿಸುವ ಉದ್ದೇಶ ಕೇಂದ್ರಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಸದಸ್ಯರಾದ ಅಧಿರ್‌ ರಂಜನ್‌ ಚೌಧರಿ, ತರುಣ್‌ ಗೊಗೊಯಿ, ಶಶಿ ತರೂರ್‌ ಹಾಗೂ ಮನೀಶ್‌ ತಿವಾರಿ, ಬಿಜೆಡಿ ಮುಖಂಡ ಬಿ. ಮೆಹತಾಬ್‌, ಟಿಎಂಸಿಯ ಸುಗತಾ ರಾಯ್‌, ಡಿಎಂಕೆಯ ಎ. ರಾಜಾ ಮುಂತಾದವರು ಮಸೂದೆಯನ್ನು ವಿರೋಧಿಸಿದರು.

ADVERTISEMENT

‘ಮಸೂದೆಯನ್ನು ಸಂಸದೀಯ ಸಮಿತಿಯ ಪರಿಗಣನೆಗೆ ಕಳುಹಿಸಬೇಕು’ ಎಂದು ಎ. ರಾಜಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.