ADVERTISEMENT

ಗಲಭೆ: ಸರ್ಕಾರದ ತರಾಟೆಗೆ ವಿಪಕ್ಷ ಸಜ್ಜು

ಇಂದಿನಿಂದ ಆರಂಭವಾಗಿ ಏಪ್ರಿಲ್‌ 3ರವರೆಗೆ ಬಜೆಟ್‌ ಅಧಿವೇಶನದ ಎರಡನೇ ಭಾಗ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 20:27 IST
Last Updated 1 ಮಾರ್ಚ್ 2020, 20:27 IST
ದೆಹಲಿ ಘರ್ಷಣೆ ಸಂಬಂಧ ರಾಷ್ಟ್ರಪತಿಗೆ ದೂರು ನೀಡಿ ಹೊರ ಬರುತ್ತಿರುವ ಕಾಂಗ್ರೆಸ್‌ ನಾಯಕರು
ದೆಹಲಿ ಘರ್ಷಣೆ ಸಂಬಂಧ ರಾಷ್ಟ್ರಪತಿಗೆ ದೂರು ನೀಡಿ ಹೊರ ಬರುತ್ತಿರುವ ಕಾಂಗ್ರೆಸ್‌ ನಾಯಕರು    

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗ ಸೋಮವಾರ ಆರಂಭವಾಗಲಿದೆ. 42 ಜನರನ್ನು ಬಲಿ ಪಡೆದ ದೆಹಲಿ ಗಲಭೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳುವಾಗ್ದಾಳಿ ನಡೆಸುವ ಸಾಧ್ಯತೆ ಇದೆ. ಹಾಗೆಯೇ, ಅರ್ಥ ವ್ಯವಸ್ಥೆಯ ನಾಜೂಕು ಸ್ಥಿತಿಯ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತು ಕಾರ್ಯತಂತ್ರ ಗುಂಪಿನ ಸಭೆಯನ್ನು ಶನಿವಾರ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಹೆಚ್ಚುತ್ತಿರುವುದರ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಪಕ್ಷದ ಮುಖಂಡರಿಗೆ ಅವರು ಸೂಚನೆ ನೀಡಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಒತ್ತಡ ಹಾಕಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದೆ.

ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾಗಿದೆಹಲಿ ಗಲಭೆಗೆ ಸಂಬಂಧಿಸಿ ವಿರೋಧ ಪಕ್ಷಗಳು ಕಳೆದ ವಾರ
ಮನವಿ ಸಲ್ಲಿಸಿವೆ. ಆಗಲೂ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ವಿರೋಧ ಪಕ್ಷಗಳ ನಿಯೋಗಗಳು ಪ್ರತ್ಯೇಕವಾಗಿ ರಾಷ್ಟ್ರಪತಿಯವರನ್ನು ಭೇಟಿಯಾಗಿವೆ.

ADVERTISEMENT

ದೆಹಲಿ ಗಲಭೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೋಟಿಸ್ ನೀಡಲು ಕಾಂಗ್ರೆಸ್‌ ಮುಖಂಡರು ನಿರ್ಧಾರ ಕೈಗೊಂಡಿದ್ದಾರೆ. ಗಲಭೆಯನ್ನು ನಿಯಂತ್ರಿಸಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ಅರ್ಥ ವ್ಯವಸ್ಥೆ ನಿರ್ವಹಣೆಯ ವಿಚಾರದಲ್ಲಿಯೂ ಬೇಕಾದಷ್ಟು ಕೆಲಸ ಮಾಡಿಲ್ಲ ಎಂಬ ಎರಡು ವಿಚಾರಗಳನ್ನು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧದ ಮುಖ್ಯ ಅಸ್ತ್ರವಾಗಿ ಇರಿಸಿಕೊಳ್ಳಲು ಪ್ರಯತ್ನಿಸ
ಬಹುದು.

‘ಅಮಿತ್‌ ಶಾ ರಾಜೀನಾಮೆಗೆ ನಮ್ಮ ಒತ್ತಾಯ ಮುಂದುವರಿಯಲಿದೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.