ಹಿಮಾಚಲ ಪ್ರದೇಶದ ಸ್ಪಿತಿಯಲ್ಲಿ ಹಿಮ ಆವರಿಸಿರುವುದು
ಪಿಟಿಐ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತ ಮತ್ತು ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಸ್ಥಳೀಯ ಹವಾಮಾನ ಇಲಾಖೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಮಂಡಿ, ಕಾಂಗ್ರಾ, ಕುಲ್ಲು, ಚಂಪಾ ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಭಾರಿ ಹಿಮಪಾ, ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ. ಸ್ಪಿತಿ ಮತ್ತು ಲಾಹೌಲ್ ಜಿಲ್ಲೆಗಳಲ್ಲೂ ಹಿಮಪಾತವಾಗುವ ಸಂಭವವಿರುವುದರಿಂದ ಯೆಲ್ಲೊ ಅಲರ್ಟ್ ಘೋಷಿಸಿದೆ.
ಕೈಲಾಂಗ್‌ನಲ್ಲಿ 20 ಸೆಂ.ಮೀ, ಖದ್ರಾಲಾದಲ್ಲಿ 12 ಸೆಂ.ಮೀ ಹಿಮ ಆವರಿಸಿದೆ. ಮನಾಲಿ, ಚಂಬಾ, ಧರ್ಮಶಾಲಾ, ವೈಟ್ ಶಿಮ್ಲಾ, ಸೋಲನ್, ಕಲ್ಪಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗರಿಷ್ಠ 20 ಎಂಎಂ ಮಳೆಯಾಗಿದೆ.
ಲಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮೈನಸ್ 4.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದಲ್ಲಿ ಜ.1ರಿಂದ ಫೆ.27ರವರೆಗೆ 70.4 ಎಂಎಂನಷ್ಟು ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.