ADVERTISEMENT

ಕೋವಿಡ್‌–19 ಪರೀಕ್ಷೆಗೆ 2.5 ಲಕ್ಷ ಕಿಟ್‌ ಸಿದ್ಧ, ಏಪ್ರಿಲ್‌ 9ರೊಳಗೆ ಲಭ್ಯ

ಏಜೆನ್ಸೀಸ್
Published 6 ಏಪ್ರಿಲ್ 2020, 15:35 IST
Last Updated 6 ಏಪ್ರಿಲ್ 2020, 15:35 IST
ಪ್ರಯೋಗಾಲಯದಲ್ಲಿ ಕೊರೊನಾ ಸೋಂಕು ಪರೀಕ್ಷೆ– ಸಾಂಕೇತಿಕ ಚಿತ್ರ
ಪ್ರಯೋಗಾಲಯದಲ್ಲಿ ಕೊರೊನಾ ಸೋಂಕು ಪರೀಕ್ಷೆ– ಸಾಂಕೇತಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪರೀಕ್ಷೆಗಳನ್ನು ನಡೆಸಲು 5 ಲಕ್ಷ ರ್‍ಯಾಪಿಡ್‌ ಆ್ಯಂಡಿಬಾಡಿ (ಪ್ರತಿಕಾಯ) ಪರೀಕ್ಷೆ ನಡೆಸುವ ಕಿಟ್‌ಗಳನ್ನು ಖರೀದಿಸಿದ್ದು, ಏಪ್ರಿಲ್‌ 9ರೊಳಗೆ 2.5 ಲಕ್ಷ ಕಿಟ್‌ಗಳು ಸಿಗಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ಹೇಳಿದೆ.

ಕೋವಿಡ್‌–19 ಪರೀಕ್ಷೆಗೆ ಬಳಸುವಒಟ್ಟು 5 ಲಕ್ಷ ಕಿಟ್‌ಗಳಿಗಾಗಿ ಬೇಡಿಕೆ ಇಡಲಾಗಿದೆ. ಕಂಪನಿಯು ಏಪ್ರಿಲ್‌ 8 ಅಥವಾ 9ರಂದು 2.5 ಲಕ್ಷ ಕಿಟ್‌ಗಳನ್ನು ಪೂರೈಸುವ ಭರವಸೆ ನೀಡಿದೆ ಎಂದು ಐಸಿಎಂಆರ್‌ನ ಆರ್‌.ಗಂಗಾಖೇಡ್ಕರ್‌ ತಿಳಿಸಿದ್ದಾರೆ.

'ಕೊರೊನಾ ವೈರಸ್‌ ಸೋಂಕು ಸೂಕ್ಷ್ಮ ಪ್ರದೇಶದಲ್ಲಿ ಪ್ರತಿಕಾಯಗಳ ಪರೀಕ್ಷೆ ನಡೆಸುವಂತೆ ಐಸಿಎಂಆರ್‌ ಶಿಫಾರಸು ಮಾಡಿದೆ. ಪ್ರಸ್ತುತ ಎರಡು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಿದರೆ ನಿತ್ಯ ಕೊರೊನಾ ವೈರಸ್‌ ಸೋಂಕಿಗೆ ಸಂಬಂಧಿಸಿದ 13,000 ಪರೀಕ್ಷೆಗಳನ್ನು ನಡೆಸಬಹುದು. ಅದನ್ನು 25,000ಕ್ಕೆ ಹೆಚ್ಚಳ ಮಾಡಬಹುದಾಗಿದೆ. ನಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡರೆ ಇನ್ನಷ್ಟು ವಿಸ್ತರಿಸಬಹುದು' ಎಂದಿದ್ದಾರೆ.

ADVERTISEMENT

ಕಳೆದ 24 ಗಂಟೆಗಳಲ್ಲಿ 693 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳು 4,000 ದಾಟಿದೆ. 1,445 ಪ್ರಕರಣಗಳು ತಬ್ಲೀಗ್‌ ಜಮಾತ್‌ಗೆ ನಂಟು ಹೊಂದಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ನಿರ್ದೇಶಕರಾದ ಲಾಲ್ ಅಗರ್‌ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.