ನವದೆಹಲಿ: ಅಶ್ಲೀಲ ವಿಡಿಯೊಗಳು ಅಥವಾ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮತ್ತು ವಿವಿಧ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ಆಯೋಗದ ಮಾಜಿ ಆಯುಕ್ತ ಉದಯ್ ಮಾಹುರ್‌ಕರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯ ಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು ನಡೆಸಿತು.
‘ಅಶ್ಲೀಲ ವಿಡಿಯೊಗಳು ಹಂಚಿಕೆ ಯಾಗದಂತೆ ಮತ್ತು ಪ್ರಸಾರ ಮಾಡದಂತೆ ನಿಷೇಧಿಸಬೇಕು. ಇದಕ್ಕಾಗಿ ಪ್ರಾಧಿಕಾರ ವೊಂದನ್ನು ರಚಿಸಬೇಕು’ ಎಂದು ಕೋರಿ ಐವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಗಳ ವಿಚಾರಣೆಯನ್ನೂ ಇದೇ ವೇಳೆ ನಡೆಸಲಾಯಿತು.
ಅರ್ಜಿಗಳ ಕುರಿತು ವಿಸ್ತೃತವಾಗಿ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಉಲ್ಲು, ಎಎಲ್‌ಟಿಟಿ, ‘ಎಕ್ಸ್’, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಗೂಗಲ್, ಆ್ಯಪಲ್‌ಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತು.
‘ಇಂಥ ವಿಡಿಯೊಗಳ ನಿಯಂತ್ರಣ ಅಗತ್ಯ. ಆದರೆ, ಇದು ನ್ಯಾಯಾಂಗದ ಕಾರ್ಯವ್ಯಾಪ್ತಿಯಲ್ಲಿಲ್ಲ. ಈ ವಿಚಾರದ ಬಗ್ಗೆ ಶಾಸಕಾಂಗ ಅಥವಾ ಕಾರ್ಯಾಂಗ ಕ್ರಮ ಕೈಗೊಳ್ಳಬೇಕಿದೆ. ಆದರೂ ನಾವು ನೋಟಿಸ್ ನೀಡುತ್ತಿದ್ದೇವೆ’ ಎಂದು ಪೀಠ ಹೇಳಿತು. ‘ಈಗಾಗಲೇ ಹಲವು ನಿಯಮಗಳನ್ನು ರೂಪಿಸಲಾಗಿದೆ. ಇನ್ನಷ್ಟು ನಿಯಮಗಳನ್ನು ರೂಪಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ಬಹಳ ಸೂಕ್ಷ್ಮವಾಗಿ ಈ ಅರ್ಜಿಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದು ಕೊಳ್ಳಲಾಗುವುದು. ಈ ವೇದಿಕೆಗಳಲ್ಲಿ ಕಾಣಸಿಗುವ ವಿಡಿಯೊಗಳು ಅಶ್ಲೀಲ ಮಾತ್ರವಲ್ಲ, ವಿಕೃತವಾಗಿಯೂ ಇವೆ’ ಎಂದು ಹೇಳಿದರು.
‘ಯಾವುದೇ ನಿಯಂತ್ರಣವಿಲ್ಲದೆ ಲೈಂಗಿಕ ವಿಚಾರಗಳಿಗೆ ಸಂಬಂಧಿಸಿ ಅಶ್ಲೀಲ ವಿಡಿಯೊಗಳು ಹರಿದಾಡುತ್ತಿವೆ. ಈ ಬಗ್ಗೆ ವಿವರವಾದ ಪಟ್ಟಿಯೊಂದನ್ನು ಸಲ್ಲಿಸಿದ್ದೇನೆ’ ಎಂದು ಉದಯ್ ಪರ ವಕೀಲ ವಿಷ್ಣು ಶಂಕರ್ ಜೈಸ್ ಹೇಳಿದರು.
‘ಮೆಹ್ತಾ ಅವರೇ ಇದಕ್ಕೆ ಏನಾದರೂ ಮಾಡಲೇಬೇಕು’ ಎಂದು ನ್ಯಾಯಮೂರ್ತಿ ಗವಾಯಿ ಅವರು ಹೇಳಿದರು. ‘ಯ್ಯೂಟೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಕಂಟೆಂಟ್‌ಗಳನ್ನು ನಿಯಂತ್ರಿಸುವ ಬಗ್ಗೆ ನಿಯಮಗಳನ್ನು ರೂಪಿಸಿ’ ಎಂದು ಯೂಟ್ಯೂಬರ್ ರಣವೀರ್ ಸಿಂಗ್ ಅಲಹಾಬಾದಿಯಾ ಅವರ ಪ್ರಕರಣ ವಿಚಾರಣೆ ವೇಳೆಯೂ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.
ಅರ್ಜಿಯಲ್ಲಿರುವುದೇನು?
ನೀಲಿಚಿತ್ರದಂಥ ವಿಡಿಯೊಗಳನ್ನು ಹಂಚಿಕೊಳ್ಳುವ ಹಲವು ಜಾಲತಾಣ ಖಾತೆಗಳು, ಜಾಲತಾಣ ವೇದಿಕೆಗಳಿವೆ. ಒಟಿಟಿ ವೇದಿಕೆಗಳಲ್ಲೂ ಇಂಥ ವಿಡಿಯೊಗಳಿವೆ. ಈ ಎಲ್ಲ ವೇದಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಂಡ ಅಶ್ಲೀಲ ವಿಡಿಯೊಗಳೂ ಇವೆ
ಈ ರೀತಿಯ ವಿಡಿಯೊಗಳು ವಯಸ್ಕರು, ಯುವಕರು ಮತ್ತು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತವೆ. ವಿಕೃತ, ಅಸಹಜ ಲೈಂಗಿಕತೆಯನ್ನು
ಪ್ರಚೋದಿಸುತ್ತವೆ. ಇದರಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತವೆ
ಮೂಗುದಾರ ಹಾಕದಿದ್ದರೆ ಇಂಥ ವಿಡಿಯೊಗಳು ಸಮಾಜದ ಮೌಲ್ಯಗಳು, ಮಾನಸಿಕ ಆರೋಗ್ಯ ಮತ್ತು ಸಾರ್ವಜನಿಕರ ಸುರಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ
ಕೇಂದ್ರ ಸರ್ಕಾರವು ಸೂಕ್ತ ನಿಯಮ ರೂಪಿಸುವವರೆಗೂ ಇಂಥ ಅಶ್ಲೀಲ ವಿಡಿಯೊಗಳ ಪ್ರಸಾರ ಮತ್ತು ಹಂಚಿಕೆಯನ್ನು ರದ್ದು ಮಾಡಬೇಕು. ವಿಶೇಷವಾಗಿ ಮಕ್ಕಳು ಈ ವಿಡಿಯೊಗಳನ್ನು ನೋಡದಂತೆ ಮಾಡಬೇಕು
ಅಶ್ಲೀಲ ವಿಡಿಯೊಗಳನ್ನು ನೋಡುವುದರಿಂದ ಆಗುವ ಪರಿಣಾಮ
ಗಳನ್ನು ತಿಳಿದುಕೊಳ್ಳಲು ಭಾರತದ ಪುನರ್ವಸತಿ ಮಂಡಳಿಯು ಸೂಚಿಸಿದ ಮನೋಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು
ನವದೆಹಲಿ: ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಮತ್ತು ಅಸಭ್ಯ ಕಂಟೆಂಟ್ ಪ್ರಸಾರದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇವುಗಳ ನಿಯಂತ್ರಣಕ್ಕೆ ನಿಯಮಗಳ ಅಗತ್ಯವಿದೆ ಎಂದು ಹೇಳಿದೆ.
ಅಶ್ಲೀಲ ಕಂಟೆಂಟ್‌ಗಳ ಪ್ರಸಾರದ ಮೇಲೆ ನಿರ್ಬಂಧ ಹೇರಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರ, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೋಟಿಸ್ ಜಾರಿ ಮಡಿದೆ.
'ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತೇವೆ. ನೆಟ್‌ಫ್ಲಿಕ್ಸ್ ಇತ್ಯಾದಿಗಳಿಗೂ ನೋಟಿಸ್ ನೀಡುತ್ತಿದ್ದೇವೆ. ಅವರಿಗೂ ಸಾಮಾಜಿಕ ಜವಾಬ್ದಾರಿ ಇದೆ’ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠ ಹೇಳಿದೆ.
ಒಟಿಟಿ/ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಸಭ್ಯ ದೃಶ್ಯಗಳ ಪ್ರಸಾರ ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಕಾರ್ಯಾಂಗ ಮತ್ತು ಶಾಸಕಾಂಗದ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಕೆಲವು ನಿಯಮಗಳು ಈಗಾಗಲೇ ಇವೆ. ಇನ್ನೂ ಹೆಚ್ಚಿನ ನಿಯಮಗಳನ್ನು ಪರಿಗಣಿಸಲಾಗುತ್ತಿದೆ’ಎಂದು ಹೇಳಿದ್ದಾರೆ.
ಕೇಂದ್ರದ ಮಾಜಿ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಸಲ್ಲಿಸಿದ್ದ ಪಿಐಎಲ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ಕೇಂದ್ರ ಸರ್ಕಾರ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಉಲ್ಲು, ಎಎಲ್‌ಟಿಟಿ, ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಇತರರಿಂದ ಪ್ರತಿಕ್ರಿಯೆಯನ್ನು ಕೋರಿ ನೋಟಿಸ್ ಜಾರಿ ಮಾಡಿದೆ.
‘ಓಟಿಟಿ ವೇದಿಕೆಗಳಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರದ ಬಗ್ಗೆ ನಿಜವಾದ ಕಳವಳವಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್‌ಗಳು ಯಾವುದೇ ನಿರ್ಬಂಧವಿಲ್ಲದೆ ಪ್ರಸಾರವಾಗುತ್ತಿವೆ. ಎಂತಹ ಕಂಟೆಂಟ್‌ಗಳ ಪ್ರಸಾರ ಮಾಡಲಾಗಿದೆ ಎಂಬುದರ ಪಟ್ಟಿಯನ್ನು ನಾನು ನೀಡಿದ್ದೇನೆ’ ಎಂದು ಮಹೂರ್ಕರ್ ಪರ ಹಾಜರಿದ್ದ ವಕೀಲ ವಿಷ್ಣುಶಂಕರ ಜೈನ್ ಹೇಳಿದ್ದಾರೆ.
‘ಮಕ್ಕಳೇ ಹೆಚ್ಚು ನೋಡುವಂತಾಗಿದೆ’
ಇಂಥ ವಿಡಿಯೊಗಳನ್ನು ಮಕ್ಕಳೇ ಹೆಚ್ಚು ನೋಡುವಂತಾಗಿದೆ. ಇದು ನನ್ನ ಕಳವಳ. ಯಾವುದೇ ಕಾರ್ಯಕ್ರಮವಿರಲಿ, ಅದರಲ್ಲಿ ಬಳಸುವ ಭಾಷೆ ಇತ್ಯಾದಿ... ಈ ಯಾವುದನ್ನೂ ಇಬ್ಬರು ಪುರುಷರು ಒಟ್ಟಿಗೆ ಕೂತು ನೋಡುವುದಕ್ಕೂ ಸಾಧ್ಯವಿಲ್ಲ. ಇಂಥ ಕಾರ್ಯಕ್ರಮಗಳನ್ನು 18 ತುಂಬಿದವರೇ ನೋಡಬೇಕು ಎಂಬ ನಿಯಮವಿದೆಯಷ್ಟೆ. ಇದು ಬಿಟ್ಟು ಬೇರೆ ಯಾವುದೇ ಸೆನ್ಸಾರ್ ಇಲ್ಲ – ತುಷಾರ್ ಮೆಹ್ತಾ, ಸಾಲಿಸಿಟರಲ್ ಜನರಲ್
ಇದು ನಮ್ಮ ವ್ಯಾಪ್ತಿಯ ವಿಚಾರವಲ್ಲ. ನಾವು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಕಸಿಯುತ್ತಿದ್ದೇವೆ ಎನ್ನುವ ಆರೋಪ ಮೊದಲೇ ನಮ್ಮ ಮೇಲಿದ. ಒಟಿಟಿ ವೇದಿಕೆಗಳ ಪ್ರತಿನಿಧಿಗಳೂ ನ್ಯಾಯಾಲಯದ ಮುಂದೆ ಬರಲಿ, ಅವರಿಗೂ ಸ್ಪಲ್ಪ ಸಾಮಾಜಿಕ ಜವಾಬ್ದಾರಿ ಇರಲಿ.ಬಿ.ಆರ್. ಗವಾಯಿ, ನ್ಯಾಯಮೂರ್ತಿ
ಸಂಬಂಧಪಟ್ಟ ಅಧಿಕಾರಿಗಳ ಬಳಿ ಪ್ರತಿನಿಧಿಯನ್ನು ಕಳುಹಿಸಲಾಗಿದೆ, ದೂರು ನೀಡಲಾಗಿದೆ. ಆದರೆ, ಯಾವುದರಿಂದಲೂ ಪ್ರಯೋಜನವಾಗಿಲ್ಲ.ಐವರು ಸಲ್ಲಿಸಿದ ಅರ್ಜಿಯಲ್ಲಿ ಹೇಳಿರುವ ಅಂಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.