ADVERTISEMENT

ಅಸ್ಸಾಂ ಪ್ರವಾಹ: 30 ಜಿಲ್ಲೆಗಳಲ್ಲಿ ಹಾನಿ; 56 ಲಕ್ಷ ಜನರಿಗೆ ಸಂಕಷ್ಟ

ಏಜೆನ್ಸೀಸ್
Published 27 ಜುಲೈ 2020, 8:54 IST
Last Updated 27 ಜುಲೈ 2020, 8:54 IST
ಅಸ್ಸಾಂ ಪ್ರವಾಹ ಬಿಂಬಿಸುವ ಚಿತ್ರ
ಅಸ್ಸಾಂ ಪ್ರವಾಹ ಬಿಂಬಿಸುವ ಚಿತ್ರ    

ಗುವಾಹಟಿ: ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ 30 ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, 56 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 102 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಪ್ರವಾಹ ಸಂತ್ರಸ್ತರಿಗಾಗಿ 615 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತರಾಣ್ಯ ಪ್ರದೇಶದಲ್ಲಿ 132 ಪ್ರಾಣಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

‘ಪ್ರವಾಹದಲ್ಲಿ ಸಿಲುಕಿ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತಾರಣ್ಯದ132 ಪ್ರಾಣಿಗಳು ಮೃತಪಟ್ಟಿವೆ. ಇದರಲ್ಲಿ 14 ಘೇಂಡಾಮೃಗಗಳು, 5 ಕಾಡು ಎಮ್ಮೆಗಳು, 8 ಕಾಡುಹಂದಿಗಳು, 101 ಜಿಂಕೆಗಳು, ಮೂರು ಮುಳ್ಳುಹಂದಿಗಳು ಹಾಗೂ 1 ಹೆಬ್ಬಾವು ಮೃತಪಟ್ಟಿವೆ’ ಎಂದು ಅಸ್ಸಾಂ ಸರ್ಕಾರ ಮಾಹಿತಿ ನೀಡಿದೆ.

ADVERTISEMENT

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್‌) ಒಂದು ತಂಡ ಪ್ರವಾಹ ಪೀಡಿತ ಬಾರ್‌ಪೆಟಾ ಜಿಲ್ಲೆಯ ದಿಘಿರ್‌ಪಾಮ್‌ ಬಜಾರ್‌ ಪ್ರದೇಶದಿಂದ ಜನ–ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಭಾನುವಾರ ಸ್ಥಳಾಂತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.