ADVERTISEMENT

ಬಿಹಾರ ಚುನಾವಣೆ: 7 ಲಕ್ಷ ‘ನೋಟಾ' ಚಲಾವಣೆ

ಪಿಟಿಐ
Published 11 ನವೆಂಬರ್ 2020, 9:52 IST
Last Updated 11 ನವೆಂಬರ್ 2020, 9:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಮತದಾರರು ‘ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವ ಅಭ್ಯರ್ಥಿಗೂ ಮತ ಹಾಕುವುದಿಲ್ಲ‘ ಎಂದು ಸೂಚಿಸುವ ‘ನೋಟಾ‘ (ಎನ್‌ಒಟಿಎ)ವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 7,06,252 ಮತದಾರರು (ಶೇ 1.7) ನಾವು ಯಾವುದೇ ಅಭ್ಯರ್ಥಿಗಳಿಗೆ ಮತಚಲಾಯಿಸುವುದಿಲ್ಲ ಎಂದು ಸೂಚಿಸುವ ‘ನೋಟಾ‘ವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಿಹಾರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. 4 ಕೋಟಿ ಮತದಾರರು ಮತಚಲಾಯಿಸಿದ್ದರು. ಒಟ್ಟು ಮತದಾರರ ಸಂಖ್ಯೆ 7.3 ಕೋಟಿ. ಚಲಾವಣೆಯಾಗಿದ್ದು ಶೇ 57.09ರಷ್ಟು ಮತಗಳು. ಇದರಲ್ಲಿ ಶೇ 1.7 ರಷ್ಟು ಮತದಾರರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ADVERTISEMENT

ಈ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರಳ ಬಹುಮತದೊಂದಿಗೆ ಪುನಃ ಅಧಿಕಾರ ನಡೆಸಲು ಅವಕಾಶ ಪಡೆದುಕೊಂಡಿದೆ.

243 ಸದಸ್ಯರ ಪೈಕಿ 125 ಸ್ಥಾನಗಳನ್ನು ಎನ್‌ಡಿಎ ಒಕ್ಕೂಟ ಗೆದ್ದುಕೊಂಡರೆ, ಆರ್‌ಜೆಡಿ ನೇತೃತ್ವದ ಮಹಾ ಗಠಬಂಧ್‌ ಒಕ್ಕೂಟ 110 ಸ್ಥಾನ ಪಡೆದು ವಿರೋಧ ಪಕ್ಷವಾಗಿದೆ. ಸತತ ನಾಲ್ಕನೇ ಅವಧಿಗೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗುವತ್ತ ಹೆಜ್ಜೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.