ADVERTISEMENT

Pahalgam Attak | ಭಯೋತ್ಪಾದಕ ದಾಳಿ ಖಂಡಿಸಿ ದೆಹಲಿಯಲ್ಲಿ ವ್ಯಾಪಾರಿಗಳ ಬಂದ್

ಪಿಟಿಐ
Published 25 ಏಪ್ರಿಲ್ 2025, 10:22 IST
Last Updated 25 ಏಪ್ರಿಲ್ 2025, 10:22 IST
<div class="paragraphs"><p>ದೆಹಲಿ ಬಂದ್‌</p></div>

ದೆಹಲಿ ಬಂದ್‌

   

ಪಿಟಿಐ ಚಿತ್ರ

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಇಂದು (ಶುಕ್ರವಾರ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯಾಪಾರಿಗಳು ಬಂದ್ ನಡೆಸಿ ಪ್ರತಿಭಟಿಸಿದರು. ಈ ಹಿನ್ನೆಲೆಯಲ್ಲಿ ನಗರದ ಜನಪ್ರಿಯ ಶಾಪಿಂಗ್‌ ಕೇಂದ್ರಗಳಾದ ಕನ್ನಾಟ್‌ ಪ್ಲೇಸ್‌, ಸದರ್‌ ಬಜಾರ್ ಮತ್ತು ಚಾಂದನಿ ಚೌಕ್‌ ಸೇರಿದಂತೆ 900ಕ್ಕೂ ಹೆಚ್ಚು ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದವು.

ADVERTISEMENT

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT)ದ ಪ್ರಕಾರ, ದೆಹಲಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಇದರ ಪರಿಣಾಮವಾಗಿ ದಿನಕ್ಕೆ ಸುಮಾರು ₹1,500 ಕೋಟಿ ವ್ಯಾಪಾರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾಕರ ದಾಳಿಯನ್ನು ಖಂಡಿಸಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಗುರುವಾರ ಬಂದ್‌ಗೆ ಕರೆ ನೀಡಿತ್ತು. ಕನ್ನಾಟ್‌ ಪ್ಲೇಸ್‌ನಲ್ಲಿ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಲಾಯಿತು. ವಿವಿಧ ವ್ಯಾಪಾರಿ ಸಂಘಗಳು ಸಹ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದವು.

‘ಇದು ಕೇವಲ ಪ್ರತಿಭಟನೆಯಲ್ಲ, ಭಯೋತ್ಪಾದನೆಯ ವಿರುದ್ಧದ ಸಾಮೂಹಿಕ ನಿಲುವು. ಈ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಬಂದ್ ಆಚರಿಸುತ್ತಿದ್ದೇವೆ’ ಎಂದು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಹೇಳಿದರು.

ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.